ಭಾರತಿ ಕಾಲೋನಿಯ ಹಷ೯ (21) ಎಂಬ ಯುವಕನೇ ಕೊಲೆಯಾದವನು. ಹಳೇ ವೈಷಮ್ಯಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾದರೂ ಈ ಘಟನೆ ನಂತರ ಶಿವಮೊಗ್ಗ ನಗರವು ಭಾರಿ ಬಿಗುವಿನಿಂದ ಕೂಡಿದೆ.
ಈ ಘಟನೆ ಖಂಡಿಸಿ ಶಿವಮೊಗ್ಗ ದ ಕೆಲವು ಕಡೆ ಕಲ್ಲು ತೂರಾಟ ನಡೆಸಲಾಗಿದೆ. ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಗಲಾಟೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ನಗರದಲ್ಲಿ 144 ನೇ ಸೆಕ್ಷನ್ ಜಾರಿ ಮಾಡಲಾಗಿದೆ.
ನಗರದ ಎಲ್ಲೆಡೆ ಬಿಗಿ ಪೋಲೀಸ್ ಬಂದೋಬಸ್ತು ಹಾಕಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗಕ್ಕೆ ಈ ಬೆಳಿಗ್ಗೆ ಭೇಟಿ ನೀಡಿದರು. ಯುವಕನ ಶವ ನೋಡಲು ಶವಾಗಾರಕ್ಕೆ ಭೇಟಿ ನೀಡಿ ಯುವಕನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಈ ದುಷ್ಕ್ಯತ ಹಿಂದಿರುವ ಆರೋಪಿಗಳನ್ನು ಕೂಡಲೇ ಹೆಡಮುರಿ ಕಟ್ಟಿ ತರಲು ಪೋಲಿಸರು ಯೋಜನೆ ರೂಪಿಸಿದ್ದಾರೆ ಎಂದು ಸಚಿವ ಜ್ಞಾನೇಂದ್ರ ಹೇಳಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು