ಜಿಮ್ ನಲ್ಲಿ ವರ್ಕೌಟ್ ಮಾಡುವಾಗಲೇ ಹಿಂದಿ ನಟ ಸಿದ್ಧಾಂತ್ ಸೂರ್ಯವಂಶಿ ಸಾವು

Team Newsnap
1 Min Read
Hindi actor Siddhant Suryavanshi died while working out in the gym ಜಿಮ್ ನಲ್ಲಿ ವರ್ಕೌಟ್ ಮಾಡುವಾಗಲೇ ಹಿಂದಿ ನಟ ಸಿದ್ಧಾಂತ್ ಸೂರ್ಯವಂಶಿ ಸಾವು

ಹಿಂದಿ ಕಿರುತೆರೆಯಲ್ಲಿ ಜನಪ್ರಿಯ ‘ಕುಸುಮ್’ ಮತ್ತು ‘ಕಸೌತಿ ಜಿಂದಗಿ ಕೇ’ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ನಟ ಸಿದ್ಧಾಂತ್ ಸೂರ್ಯವಂಶಿ ( Siddhant Suryavanshi ) ಜಿಮ್ ಮಾಡುವಾಗಲೇ ಶುಕ್ರವಾರ ಅಕಾಲಿಕ ಸಾವು ಕಂಡರು .

ನಟ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಸಾವನ್ನಪ್ಪಿದ್ದಾರೆ ಪತ್ನಿ ಮತ್ತು ಅವರ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಖ್ಯಾತ ಛಾಯಾಗ್ರಾಹಕ ವಿರಲ್ ಭಯಾನಿ ಅವರು ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.ದಿ ರಾಜೀವ್ ಗಾಂಧಿ ಹತ್ಯೆಯ 6 ಹಂತಕರ ಬಿಡುಗಡೆಗೆ ಸುಪ್ರೀಂ ಆದೇಶ

ಈ ಹಿಂದೆ ಆನಂದ್ ಸೂರ್ಯವಂಶಿ ಎಂದು ಕರೆಯಲ್ಪಡುತ್ತಿದ್ದ ನಟ ಸಿದ್ದಾಂತ್ ಬಗ್ಗೆ ಆಘಾತಕಾರಿ ಸುದ್ದಿ ಬಂದಿದೆ. ನಮಗೆ ದೊರೆತ ಆರಂಭಿಕ ಸುದ್ದಿಯ ಪ್ರಕಾರ, ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಅವರಿಗೆ ಹೃದಯಾಘಾತವಾಗಿದೆ.

ನಾವು ಈ ವರ್ಷ ಸಾಕಷ್ಟು ಯುವಕರನ್ನು ಕಳೆದುಕೊಂಡಿದ್ದೇವೆ. ಅವನು ತನ್ನ ಹೆಂಡತಿ ಅಲೆಸಿಯಾಳೊಂದಿಗೆ ಹಲವಾರು ಬಾರಿ ಅವನನ್ನು ಭೇಟಿ ಮಾಡಿದ್ದೆ, ಆತ ಫಿಟ್ ಆಗಿದ್ದ ಆತನಿಗೆ ಏಕೆ ಹೀಗೆ ಆಯ್ತು ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ.

ಸಿದ್ಧಾಂತ್ ಅವರು ಇತ್ತೀಚೆಗೆ ತಮ್ಮ ಹೆಸರನ್ನು ಆನಂದ್ ನಿಂದ ಸಿದ್ಧಾಂತ್ ಸೂರ್ಯವಂಶಿ ಎಂದು ಬದಲಾಯಿಸಿಕೊಂಡಿದ್ದರು.

Share This Article
Leave a comment