ಆಗಸ್ಟ್ 23 ರಿಂದ ರಾಜ್ಯದಲ್ಲಿ ಶಾಲೆ ಆರಂಭ – ಮಾರ್ಗದರ್ಶಿ ಸೂತ್ರಗಳು ಇಲ್ಲಿವೆ

Team Newsnap
1 Min Read

ಆಗಸ್ಟ್ 23 ರಿಂದ ರಾಜ್ಯದಾದ್ಯಂತ ಶಾಲೆಗಳು ಆರಂಭಕ್ಕೂ ಮುನ್ನ
ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಆಗಸ್ಟ್ 23 ರಿಂದ ರಾಜ್ಯಾದ್ಯಂತ 9 ಮತ್ತು 10ನೇ ತರಗತಿ ಮಕ್ಕಳಿಗೆ ಶಾಲೆ ಆರಂಭವಾಗಲಿದೆ.

  • ನಿತ್ಯ ಅರ್ಧ ದಿನ ಮಾತ್ರ ತರಗತಿ ಇರುತ್ತದೆ.
  • ಸೋಮವಾರ ದಿಂದ ಶುಕ್ರವಾರ 10 ರಿಂದ 1.30 ತರಗತಿ ಮಾಡಬೇಕು
  • ಶನಿವಾರ 10 ರಿಂದ 12.50 ವರೆಗೆ ಕ್ಲಾಸ್ ಮಾಡಬೇಕು,
  • ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ಶಾಲೆಗಳಲ್ಲಿ ಮಾಡಬೇಕು.
  • ಮಕ್ಕಳು ಮನೆಯಿಂದ ನೀರು, ಉಪಹಾರ ತರಲು ಅವಕಾಶ
  • ಶಾಲೆಗಳಲ್ಲಿ ಕುಡಿಯುವ ಬಿಸಿ ನೀರು ವ್ಯವಸ್ಥೆ ಮಾಡಬೇಕು.
  • ಹಾಜರಾತಿ ಕಡ್ಡಾಯ ಅಲ್ಲ, ಆನ್‍ಲೈನ್ ನಲ್ಲಿ ಬೇಕಾದರು ಕೂಡ ಹಾಜರಾತಿ ಆಗಬಹುದು.
  • ಒಂದು ತಂಡದಲ್ಲಿ 15-20 ವಿದ್ಯಾರ್ಥಿಗಳು ಮಾತ್ರ ಇರಬೇಕು.
  • ವಿದ್ಯಾರ್ಥಿಗಳು ಪೆನ್ನು, ಪುಸ್ತಕ, ರಬ್ಬರ್ ಸೇರಿದಂತೆ ಯಾವ ವಸ್ತುಗಳನ್ನು ಹಂಚಿಕೊಳ್ಳಬಾರದು.
  • ನಿತ್ಯ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ತಾಪಮಾನ ಪರಿಶೀಲನೆ ಮಾಡಬೇಕು.
  • ಡೆಸ್ಕ್ ನಲ್ಲಿ ಕೂರಿಸುವುದು, ವಿದ್ಯಾರ್ಥಿಯಗಳ ಆಗಮನ ಮತ್ತು ನಿರ್ಗಮದ ವೇಳೆ ಶಾಲಾ-ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮವಹಿಸಬೇಕು.
  • ಶಾಲಾ-ಕಾಲೇಜು ಕೊಠಡಿಗಳು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು.
  • ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸ್ಯಾನಿಟೈಸ್ ವ್ಯವಸ್ಥೆ ಶಾಲಾ-ಕಾಲೇಜುಗಳಲ್ಲಿ ಮಾಡಬೇಕು.
  • ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಶಾಲೆ ಪ್ರವೇಶ ಇಲ್ಲ.
  • ಪ್ರಾರ್ಥನೆ ಸಮಯ, ಊಟದ ಸಮಯದಲ್ಲಿ ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು.
  • ಗುಂಪು ಕ್ರೀಡೆಗಳ ಆಯೋಜನೆ ಮಾಡುವಾಗ ಎಚ್ಚರವಹಿಸಬೇಕು. ಕಾಲೇಜುಗಳಲ್ಲಿ ಸ್ವಿಮ್ಮಿಂಗ್ ಪೂಲ್ ಇದ್ದರೆ ಕಡ್ಡಾಯವಾಗಿ ಅದನ್ನು ಕ್ಲೋಸ್ ಮಾಡಬೇಕು.
  • ಶಾಲಾ-ಕಾಲೇಜು ಕ್ಯಾಂಪಸ್ ಗೆ ಸಾರ್ವಜನಿಕ ನಿಷೇಧ ಹೇರಬೇಕು. ವಿದ್ಯಾರ್ಥಿಗಳು ಲೈಬ್ರರಿಗಳಲ್ಲಿ ಕುಳಿತು ಓದಲು ನಿಷೇಧ.
  • ಪುಸ್ತಕ ಪಡೆದು ಮನೆಯಲ್ಲಿ ಓದುವ ನಿಯಮ ಪಾಲನೆ ಮಾಡಬೇಕು.
  • ಶಾಲಾ-ಕಾಲೇಜುಗಳ ಹಂತದ ಕ್ರೀಡಾ ಕೂಟಗಳ ಆಯೋಜನೆ ಮಾಡಬಾರದು.
Share This Article
Leave a comment