ಬೆಂಗಳೂರಿನಲ್ಲಿ ಭಾರಿ ಮಳೆ: ಭಾರಿ ಅವಾಂತರ – ಮೆಜೆಸ್ಟಿಕ್ ನಲ್ಲಿ ತಡೆ ಗೋಡೆ ಕುಸಿದು 7 ಕಾರು ಜಖಂ

Team Newsnap
1 Min Read

ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಮಳೆಯ ಅಬ್ಬರಕ್ಕೆ ಸಾಕಷ್ಟು ಅವಾಂತರಗಳು ಸೃಷ್ಠಿಯಾಗಿದೆ. ನಗರದ 8 ವಲಯದ 51 ವಾರ್ಡ್‍ಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.

ಮೆಜೆಸ್ಟಿಕ್‍ನಲ್ಲಿ ತಡೆಗೋಡೆ ಕುಸಿದು 7 ಕಾರುಗಳು ಜಖಂಗೊಂಡಿದೆ. ಶಿವಾನಂದ ಅಂಡರ್ ಪಾಸ್‍ನಲ್ಲಿ ಡಾಂಬಾರ್‌ ಕಿತ್ತು ಹೋಗಿದೆ. ಹಲವೆಡೆ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ.

ಶಿವಾಜಿನಗರದಲ್ಲಿ ಮಳೆಗೆ ಕೊಚ್ಚಿ ಹೋಗ್ತಿದ್ದ ಬೈಕ್ ರಕ್ಷಿಸಲು ಸವಾರರು ಹರಸಾಹಸ ಪಟ್ಟಿದ್ದಾರೆ. ವಿಧಾನಸೌಧ ರಸ್ತೆಯಲ್ಲಿ ಮಂಡಿಯುದ್ಧ ನಿಂತ ನೀರು ನಿಂತಿತ್ತು. ಶಾಂತಿನಗರದ ಮುಖ್ಯರಸ್ತೆಯ ನಡು ನೀರಿನಲ್ಲಿ ಬಿಎಂಡಬ್ಲ್ಯೂ ಕಾರುಗಳು ಕೆಟ್ಟು ನಿಂತಿತ್ತು. ಶಿಕ್ಷಕರ ಅಕ್ರಮ ನೇಮಕಾತಿ : ರಾಜ್ಯದ 51 ಕಡೆ ಸಿಐಡಿ ದಾಳಿ- 38 ಮಂದಿ ಶಿಕ್ಷಕರ ಬಂಧನ

ಬಾಪೂಜಿ ಲೇಔಟ್‍ನ ಮೂರನೇ ಮುಖ್ಯ ರಸ್ತೆಯ ಮೇಲೆ ಮರ ಬಿದ್ದಿದೆ. ವಿದ್ಯುತ್ ಲೈನ್ ಮತ್ತು ಕೇಬಲ್‍ಗಳ ಮೇಲೆ ಮರ ಬಿದ್ದ ಕಾರಣ ಈ ಭಾಗದಲ್ಲಿ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಸಿಲ್ಕ್ ಬೋರ್ಡ್‍ನಲ್ಲಿ ಭಾರೀ ಮಳೆಗೆ ರಸ್ತೆಯಲ್ಲೇ ನೀರು ನಿಂತಿದ್ದರಿಂದ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌ ಸೃಷ್ಟಿಯಾಗಿತ್ತು.

ಅತಿಹೆಚ್ಚು ಮಳೆ ಎಲ್ಲೆಲ್ಲಿ ?

ವಿದ್ಯಾಪೀಠ – 61.5 ಮಿ.ಮೀ
ಬಸವನಗುಡಿ – 61.5ಮಿ.ಮೀ
ಹಗಡೂರು – 48 ಮಿ.ಮೀ
ಚೌಡೇಶ್ವರಿ ವಾರ್ಡ್ ಯಲಹಂಕ – 47.5 ಮಿ.ಮೀ
ಬಿಳೆಕಲ್ಲಹಳ್ಳಿ – 42 ಮಿ.ಮೀ
ಹೊರಮಾವು – 42 ಮಿ.ಮೀ
ನಾಯಂಡನಹಳ್ಳಿ – 41 ಮಿ.ಮೀ
ಜ್ಞಾನಭಾರತಿ- 41 ಮಿ.ಮೀ
ಸಾರಕ್ಕಿ – 40 ಮಿ.ಮೀ
ಕೋಣನಕುಂಟೆ – 38 ಮಿ.ಮೀ.

Share This Article
Leave a comment