ಬೆಂಗಳೂರು ಮತ್ತು ಹಳೆ ಮೈಸೂರು ಭಾಗದಲ್ಲಿ ಜೂನ್ 18 ರಿಂದ 22 ರವರೆಗೆ ಭಾರಿ ಮಳೆಯ ಸಾಧ್ಯತೆ

Team Newsnap
1 Min Read

ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವೆಡೆ ಜೂನ್ 18ರಿಂದ 22ರವರೆಗೂ ತೀವ್ರ ಬಿರುಗಾಳಿ (Storm) ಸಹಿತ ಮಳೆಯಾಗುವ (Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಳೆ ಮೈಸೂರು ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಬೆಂಗಳೂರು, ಕೋಲಾರ, ರಾಮನಗರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಜೂನ್ 18ರಿಂದ 22ರವರೆಗೂ ತೀವ್ರ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ .

ಮಂಗಳೂರು ಮತ್ತು ರಾಮನಗರ ಭಾಗದಲ್ಲಿ ಸುಮಾರು 150 ಮಿಲಿಮೀಟರ್‌ಗೂ ಅಧಿಕ ಮಳೆಯಾಗುವ ಸಾಧ್ಯವಿದೆ.ಸಿಇಟಿ ಫಲಿತಾಂಶ ಪ್ರಕಟ : ಬಾಲಕಿಯರದ್ದೇ ಮೇಲುಗೈ

ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗುವ ಕಾರಣ ಜನರು ಮನೆಯಲ್ಲಿಯೇ ಸುರಕ್ಷಿತವಾಗಿರಿ , ಮತ್ತು ಆದಷ್ಟು ಮಳೆಯ ಸಮಯದಲ್ಲಿ ಅಂಡರ್ ಪಾಸ್‌ಗಳಲ್ಲಿ ಸಂಚರಿಸಬೇಡಿ ಎಂದು ಹವಾಮಾನ ಇಲಾಖೆ ಜನರಿಗೆ ಸಲಹೆ ನೀಡಿದೆ.

Share This Article
Leave a comment