ಸಿಇಟಿ ಫಲಿತಾಂಶ ಪ್ರಕಟ : ಬಾಲಕಿಯರದ್ದೇ ಮೇಲುಗೈ

Team Newsnap
2 Min Read
CET result announced, : Girls have upper hand ಸಿಇಟಿ ಫಲಿತಾಂಶ ಪ್ರಕಟ, : ಬಾಲಕಿಯರದ್ದೇ ಮೇಲುಗೈ

ಬೆಂಗಳೂರು: 2023-24ನೇ ಸಾಲಿನ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್​ ಗುರುವಾರ ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿ, ಇಂಜಿನಿಯರಿಂಗ್ ಕೋರ್ಸ್​ಗೆ- 2,03,381 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರೆ, ಕೃಷಿ ವಿಜ್ಞಾನ ಕೋರ್ಸಿಗೆ- 1,64,187, ಪಶುಸಂಗೋಪನೆ- 166756, ಯೋಗ ಮತ್ತು ನ್ಯಾಚುರೋಪತಿಗೆ- 2,06191, ಬಿ.ಪಾರ್ಮ್ ಮತ್ತು ಡಿ.ಪಾರ್ಮ್ ಕೋರ್ಸ್ ಗೆ- 2,06,340, ನರ್ಸಿಂಗ್ ಕೋರ್ಸಿಗೆ – 1,66,808 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಹೇಳಿದರು

ಇಂಜಿನಿಯರಿಂಗ್ ಟಾಪರ್ಸ್:

ಇಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 10 ಜನ ವಿದ್ಯಾರ್ಥಿಗಳು ಟಾಪರ್ ಗಳ ಪೈಕಿ ವಿಘ್ನೇಶ್​ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ.

ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ​

ತೃತೀಯ ಸ್ಥಾನವನ್ನು ಮೃದ್ಧ್​ ಶೆಟ್ಟಿ ಹಾಗೂ ಎಸ್.ಸುಮೇಧ್​ಗೆ 4ನೇ ಸ್ಥಾನ ಪಡೆದುಕೊಂಡಿದ್ದರೆ, ಮಾಧವ ಸೂರ್ಯಗೆ 5ನೇ ಸ್ಥಾನ ಲಭಿಸಿದೆ.

ವಿಘ್ನೇಶ್ ನಟರಾಜ್ ಕುಮಾರ್ ಮೊದಲ ರ್ಯಾಂಕ್ ಪಡೆದಿದ್ದಾರೆ. ಇವರು ಕ್ವಾಲಿಫೈ ಪರೀಕ್ಷೆಯಲ್ಲಿ 99.667 ಅಂಕ ಗಳಿಸಿದ್ದಾರೆ, ಸಿಟಿಇಯಲ್ಲಿ 96.111 ಅಂಕ ಪಡೆಯುವುದರೊಂದಿಗೆ ಒಟ್ಟು ಶೇ 97.111 ಅಂಕ ಪಡೆದಿದ್ದಾರೆ

ಸಿಇಟಿ ಮೆರಿಟ್ ಪಟ್ಟಿ

ಇಂಜಿನಿಯರಿಂಗ್ ಕೋರ್ಸಿಗೆ- 2,03,381
ಕೃಷಿ ವಿಜ್ಞಾನ ಕೋರ್ಸಿಗೆ- 1,64,187
ಪಶುಸಂಗೋಪನೆ- 166756
ಯೋಗ ಮತ್ತು ನ್ಯಾಚುರೋಪತಿ ಗೆ- 2,06191
ಬಿ.ಪಾರ್ಮ್ ಮತ್ತು ಡಿ.ಪಾರ್ಮ್ ಕೋರ್ಸ್ ಗೆ- 2,06,340
ನರ್ಸಿಂಗ್ ಕೋರ್ಸಿಗೆ – 1,66,808 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ
ಬಿ-ಫಾರ್ಮ್​ ವಿಭಾಗ​
ನ್ಯಾಚೂರೋಪತಿ ಹಾಗೂ ಯೋಗದಲ್ಲಿ ಪ್ರತೀಕ್ಷಾ ಟಾಪ್ ಆಗಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದ ಬೆಂಗಳೂರಿನ ಶ್ರೀ ಕುಮಾರನ್ ಚಿಲ್ಡ್ರನ್ ಹೋಂ ಕಾಂಪೋಸಿಟ್ ಪ್ರಿ ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ, 98.661 ಅಂಕ ಪಡೆದು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾಳೆ.

  • ಬೆಂಗಳೂರಿನ ಮಹೇಶ್ ಪಿಯು ಕಾಲೇಜಿನ ಮಾಳವಿಕಾ ಕಪೂರ್ ದ್ವಿತೀಯ
  • ಬೆಂಗಳೂರಿನ ನಾರಾಯಣ ಇ ಟೆಕ್ನೋ ಸ್ಕೂಲ್​ನ ಮಾಧವ್ ಸೂರ್ಯ ತಡೇಪಲ್ಲಿ ತೃತೀಯ
  • ಬಿಎಸ್​ಸಿ ವಿಭಾಗದಲ್ಲಿ ಬೈರೇಶ್​ಗೆ ಮೊದಲ ರ್ಯಾಂಕ್
  • ಅಗ್ರಿಕಲ್ಚರ್(ಕೃಷಿ ವಿಜ್ಞಾನ )ವಿಭಾಗದಲ್ಲಿ ಬೈರೇಶ್ ಎಸ್ ಎಚ್ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.
  • ಮಂಗಳೂರಿ ಎಕ್ಸ್ ಪರ್ಟ್ ಯುನಿವರ್ಸಿಟಿ ಕಾಲೇಜ್ ವಿದ್ಯಾರ್ಥಿಯಾಗಿರುವ ಬೈರೇಶ್, ಕ್ವಾಲಿಫಿಕೇಷನ್​ನಲ್ಲಿ 99.75 ಅಂಕ, ಸಿಟಿಟಿಯಲ್ಲಿ 93.75 ಅಂಕ ಪಡೆದು ಮೊದಲ ರ್ಯಾಂಕ್ ಪಡೆದಿದ್ದಾರೆ.
  • ರಾಯಚೂರಿನ ಪ್ರಮಣ ಪಿಯು ಕಾಲೇಜ್ ವಿದ್ಯಾರ್ಥಿ ಅನಯರಾಗ್ ರಂಜನ್ ದ್ವಿತೀಯ
  • ಕಾರ್ತಿಕ್ ಮನೋಹರ್ ಸಿಂಹಸನ್ ತೃತೀಯ
  • ವೆಟನರಿ ಸೈನ್ಸ್ ವಿಭಾಗ
  • ವೆಟನರಿ ಸೈನ್ಸ್ ವಿಭಾಗದಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಮಹೇಶ್ ಪಿಯು ಕಲೇಜಿನ ವಿದ್ಯಾರ್ಥಿ ಮಾಳವಿಕ ಕಾಪೂರ್ ಮೊದಲ ರ್ಯಾಂಕ್ ಪಡೆದಿದ್ದು. ಸಿಇಟಿಯಲ್ಲಿ ಒಟ್ಟು 97.222 ಅಂಕ ಪಡೆದಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 20 ಹಾಗೂ 21ರಂದು ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ, ನ್ಯಾಚುರೋಪತಿ, ಡಿ ಫಾರ್ಮ ಕೋರ್ಸ್​ ಹಾಗೂ ಬಿಎಸ್ಸಿ ನರ್ಸಿಂಗ್​ಗೆ ಪ್ರವೇಶ ಪರೀಕ್ಷೆ ನಡೆಸಿತ್ತು. ಒಟ್ಟು 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಬೆಂ- ಮೈ ಹೈವೇಯಲ್ಲಿ ಮತ್ತೆ ಭೀಕರ ಅಪಘಾತ: ಇಬ್ಬರು ಸಾವು, ಮೂವರಿಗೆ ಗಾಯ

karresults.nic.in ಹಾಗೂ cetonline.karnataka.gov.in ವೆಬ್​ಸೈಟ್​ನಲ್ಲಿ ಬೆಳಗ್ಗೆ 11 ಗಂಟೆಗೆ ಫಲಿತಾಂಶ ಲಭ್ಯವಿದೆ.

Share This Article
Leave a comment