January 8, 2025

Newsnap Kannada

The World at your finger tips!

mandya male

ಮಂಡ್ಯದಲ್ಲಿ ಭಾರಿ ಮಳೆ : ಹರ್ಷ ತಂದ ವರ್ಷದ ವರುಣನ ಸಿಂಚನ

Spread the love

ಯುಗಾದಿ ನಂತರ ಮಂಡ್ಯ ಸೇರಿದಂತೆ ಕೆಲವು ಭಾಗದಲ್ಲಿ ಬುಧವಾರ ಭಾರಿ ಮಳೆ ಸುರಿಯಿತು.

ವರ್ಷದ ಮೊದಲ ಮಳೆ ಜಿಲ್ಲೆಯ ಕೆಲವೆಡೆ ತಂಪನೆರದಿದೆ. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಭಾರಿ ಗಾಳಿ ಬೀಸಿದ ನಂತರ ಮಿಂಚು ಗುಡುಗು ಸಹಿತ ಮಳೆ ಆರಂಭವಾಯಿತು.

ಬೇಸಿಗೆ ಬಿಸಿಲಿಗೆ ತತ್ತರಿಸಿದ್ದ ಜನಕ್ಕೆ ಈ ಮುಂಗಾರು ಮಳೆ ತಂಪನೆರೆಯಿತು. ಮಂಡ್ಯದ ವಿಶ್ವೇಶ್ವರಯ್ಯ ಕ್ರಿಡಾಂಗಣ ಹಾಗೂ ವಿ ವಿ ರಸ್ತೆ , ಕಲಾಮಂದಿರ ರಸ್ತೆಗಳೂ ಸೇರಿದಂತೆ ಅನೇಕ ರಸ್ತೆಗಳು ಜಲಾವೃತವಾದವು.

ಮಂಡ್ಯದ ಸುತ್ತ ಮುತ್ತಲಿನ ಹಳ್ಳಿಗಳಲ್ಲೂ ಕೂಡ ಮಳೆಯಾಗಿದೆ ಸಂಜೆ 4.30 ರ ವೇಳೆಗೆ ಮಳೆ ಸುರಿದು ತಣ್ಣಗಾಯಿತು. ಆದರೆ ಮೋಡ ಮುಸುಕಿ ಮಳೆಗಾಲ ಅನುಭವ ತಂದು ಕೊಟ್ಟಿತು.

Copyright © All rights reserved Newsnap | Newsever by AF themes.
error: Content is protected !!