ಬೇಲೂರಿನ ಗಳಿಗೆ ತೇರು ಎಳೆಯುವ ಮುನ್ನ ಕುರಾನ್ ಪಠಣ – ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ

Team Newsnap
1 Min Read

ರಾಜ್ಯದಲ್ಲಿ ಭಾವೈಕ್ಯತೆ ಸಂದೇಶ ಸಾರುವ ಅಪರೂಪದ ಸನ್ನಿವೇಶ ಬೇಲೂರಿನ ಚನ್ನಕೇಶವ ಸ್ವಾಮಿ ಸನ್ನಿಧಿಯಲ್ಲಿ ನಡೆದಿದೆ.

ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿಯ ಗಳಿಗೆ ತೇರು ಬುಧವಾರ ನಡೆದಿದೆ. ಈ ಗಳಿಗೆ ತೇರು ಎಳೆಯುವ ಮುನ್ನ ಕುರಾನ್ ಪಠಣ ಮಾಡುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ಅದರಂತೆ ಖಾಜ ಸಾಹೇಬರು ತೇರಿನ ಹಗ್ಗ ಹಿಡಿದು ಕುರಾನ್ ಪಠಣ ಮಾಡಿದ ನಂತರ ಭಕ್ತರು ತೇರು ಎಳೆದು ಭಕ್ತಿ ಸಮರ್ಪಿಸಿದ್ದಾರೆ.

ಬೇಲೂರು ತಾಲೂಕಿನ ದೊಡ್ಡ ಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಖುರಾನ್ ಪಠಣ ಮಾಡಿದವರು.

ಈ ಕುರಿತು ಮಾತನಾಡಿದಭಾಷಾ ಅವರು, ಬಹಳ ಹಿಂದಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ನಾನು ಐವತ್ತು ವರ್ಷದಿಂದ ಕುರಾನ್ ಪಠಣ ಮಾಡುತ್ತಿದ್ದೇನೆ. ನನ್ನ ನಂತರ ನನ್ನ ಮಗ, ಅವನ ನಂತರ ಮೊಮ್ಮಗ ಈ ಸಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತಾರೆ. ಎಲ್ಲಾ ಧರ್ಮದವರಿಗೂ ಒಳ್ಳೆಯದಾಗಲಿ ಎಂದು ಕುರಾನ್ ಪಠಣ ಮಾಡುತ್ತೇವೆ ಎಂದು ತಿಳಿಸಿದರು.

ಈಗ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿವಾದಗಳನ್ನು ನಾವು ಹುಟ್ಟು ಹಾಕಿರುವುದು. ನಮ್ಮ ಸ್ವಾರ್ಥಕ್ಕಾಗಿ ನಾವು ಮಾಡಿಕೊಳ್ಳುತ್ತಿರುವುದು. ಹಿಂದೂಗಳ ಮೈಯಲ್ಲಿ ಹರಿಯುತ್ತಿರುವುದು ಒಂದೇ ರಕ್ತ, ನಮ್ಮ ಮೈಯಲ್ಲಿ ಹರಿಯುತ್ತಿರುವುದು ಒಂದೇ ರಕ್ತ. ಎಲ್ಲರೂ ಶಾಂತಿ, ಸಹಬಾಳ್ವೆಯಿಂದ ಬಾಳಬೇಕು ಎಂದರು ಭಾಷಾ.

Share This Article
Leave a comment