ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ: ಜಿಎಸ್ ಟಿ ಹೊರೆ ತಪ್ಪಿಲ್ಲ

Team Newsnap
1 Min Read

ಚಿನ್ನ ಖರೀದಿಸಲು ಬಯಸುವವರಿಗೆ ಸಿಹಿಸುದ್ದಿ ಸಿಕ್ಕಿದೆ. ಚಿನ್ನದ ದರ ಇಂದು ಕುಸಿದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿರುವುದು ದೇಶಿಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಬೆಳ್ಳಿ ದರ ಕೂಡ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಏಪ್ರಿಲ್ 15 ರಂದು, 24 ಕ್ಯಾರೆಟ್ ಚಿನ್ನದ ಬೆಲೆ 760 ರೂಪಾಯಿ ಕುಸಿದಿದೆ. ಇದರೊಂದಿಗೆ ಪ್ರತಿ ಹತ್ತು ಗ್ರಾಂ ಚಿನ್ನದ ದರ 61,040ಕ್ಕೆ ಕುಸಿದಿದೆ.

22 ಕ್ಯಾರೆಟ್ ಚಿನ್ನ ಕೂಡ ಇಳಿಕೆಯಾಗಿದೆ ಅಲಂಕಾರಿಕ ಚಿನ್ನದ ದರ 700 ಕುಸಿದಿದೆ. ಇದರೊಂದಿಗೆ ಪ್ರತಿ ಹತ್ತು ಗ್ರಾಂ ಚಿನ್ನ 55,950 ರೂಪಾಯಿ ಆಗಿದೆ.
ಇಂದು ಬೆಳ್ಳಿ ಬೆಲೆ 1,500 ರೂಪಾಯಿ ಇಳಿಕೆಯಾಗಿದೆ. ಇದರಿಂದಾಗಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 81,500 ರೂಪಾಯಿಗೆ ಕುಸಿದಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆಗಳಿಗೆ ಸರಕು ಮತ್ತು ಸೇವಾ ತೆರಿಗೆ (GST)ಯನ್ನ ಸೇರಿಸಲಾಗುತ್ತದೆ. ಹೀಗಾಗಿ ಇದೂ ಸೇರಿದ್ರೆ ಚಿನ್ನದ ಬೆಲೆ ಕೊಂಚ ಹೆಚ್ಚಲಿದೆ. ಇನ್ನು ತಯಾರಿಕೆಯ ಶುಲ್ಕವೂ ಇದ್ದು, ಇವುಗಳೂ ಸೇರಿದರೆ ಕಚ್ಚಾ ದರ ಇನ್ನೂ ಹೆಚ್ಚಲಿದೆ.ಇದನ್ನು ಓದಿ –ನಟ ಚೇತನ್‌ ಅಹಿಂಸಾ ಭಾರತದ ವೀಸಾ ರದ್ದು

Share This Article
Leave a comment