ಜೈಲಿನಿಂದಲೇ ಎಸ್ಪಿಗೆ ಪತ್ರ: ಹತ್ರಾಸ್ ಪ್ರಕರಣದ ಮುಖ್ಯ ಆರೋಪಿ

Team Newsnap
1 Min Read

ಹತ್ರಾಸ್ ಪ್ರಕರಣದದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಸಂದೀಪ್ ಎಸ್‍ಪಿಗೆ ಪತ್ರ ಬರೆದಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಪತ್ರದಲ್ಲಿ ತಾನು ನಿರ್ದೋಷಿ. ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಸಂದೀಪ್ ಒತ್ತಾಯಿಸಿದ್ದಾನೆ. ಸೆಪ್ಟೆಂಬರ್ 7ರಂದು ಜೈಲಿನಿಂದಲೇ ಹತ್ರಾಸ್ ಎಸ್‍ಪಿಗೆ ಪತ್ರ ಬರೆದಿರುವ ಸಂದೀಪ್, ಬಂಧಿತ ಇನ್ನುಳಿದ ಮೂವರು ಸಹ ನಿರಪರಾಧಿಗಳು. ಆಕೆಯ ತಾಯಿ ಮತ್ತು ಸೋದರನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾನೆ.

19 ವರ್ಷದ ಯುವತಿ ಜೊತೆ ನನ್ನ ಸ್ನೇಹವಿತ್ತು. ಆದ್ರೆ ನಮ್ಮಿಬ್ಬರ ಸ್ನೇಹ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಘಟನೆಯ ದಿನ ನಾನು ಸ್ಥಳದಲ್ಲಿದ್ದೆ. ಆದ್ರೆ ಯುವತಿ ತಾಯಿ ಮತ್ತು ಸೋದರ ನನ್ನನ್ನು ಮನೆಗೆ ಕಳುಹಿಸಿದರು. ನಂತರ ನನ್ನನ್ನ ಆರೋಪಿ ಎಂದು ಬಂಧಿಸಿ ಜೈಲಿಗೆ ಕರೆತರಲಾಯ್ತು. ಯುವತಿಯ ಮೇಲೆ ಆಕೆ ತಾಯಿ ಮತ್ತು ಸೋದರ ಹಲ್ಲೆ ನಡೆಸಿದ್ದರಿಂದ ಅವಳು ಸಾವನ್ನಪ್ಪಿದ್ದಾಳೆ. ನಮ್ಮ ಮೇಲೆ ಸುಳ್ಳು ಕೇಸ್ ದಾಖಲಿಸಿ ಜೈಲಿನಲ್ಲಿರಿಸಲಾಗಿದೆ.

ಸಾವನ್ನಪ್ಪಿರುವ ಯುವತಿ ಒಳ್ಳೆಯವಳಾಗಿದ್ದರಿಂದ ಆಕೆಯ ಜೊತೆ ನನ್ನ ಸ್ನೇಹವಿತ್ತು. ಇಬ್ಬರು ಫೋನ್ ನಲ್ಲಿ ಮಾತನಾಡುತ್ತಿದ್ದೇವು. ಹೊಲದಲ್ಲಿ ನನ್ನ ಜೊತೆಗಿನ ಸ್ನೇಹದ ವಿಚಾರವಾಗಿ ಆಕೆಯ ಮೇಲೆ ಕುಟುಂಬಸ್ಥರು ಹಲ್ಲೆ ನಡೆಸಿರುವ ವಿಚಾರ ನನಗೆ ತಿಳಿಯಿತು. ಹಲ್ಲೆ ಆರೋಪದಿಂದ ತಪ್ಪಿಸಿಕೊಳ್ಳಲು ಯುವತಿಯ ತಾಯಿ ಮತ್ತು ಸೋದರ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದರಿಂದ ಸೆಪ್ಟೆಂಬರ್ 20ರಿಂದ ನಾವು ಜೈಲಿನಲ್ಲಿದ್ದೇವೆ. ನಿರಪರಾಧಿಗಳಾದ ನಮಗೆ ನ್ಯಾಯ ನೀಡಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ ಎಂದು ಸಂದೀಪ್ ಪತ್ರದಲ್ಲಿ ಹೇಳಿದ್ದಾನೆ. ಇನ್ನುಳಿದ ಬಂಧಿತ ರವಿ, ರಾಮು ಮತ್ತು ಲವಕುಶ್ ಅವರ ಸಹಿ ಈ ಪತ್ರದಲ್ಲಿದೆ.

Share This Article
Leave a comment