ಮಳವಳ್ಳಿ : ಕೃಷಿ ಪಂಪ್ ಸೆಟ್ ಗಾಗಿ ವಿದ್ಯುತ್ ಪರಿವರ್ತಕ ಅಳವಡಿಕೆಗೆ ರೈತನೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸೆಸ್ಕಾಂ ಸಹಾಯಕ ಇಂಜಿನಿಯರ್ 4500 ರು ಲಂಚ ಸ್ವೀಕರಿಸುವ ವೇಳೆ ಹಲಗೂರಿನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ .
ತಾಲೂಕಿನ ಹಲಗೂರು ಹೋಬಳಿಯ ಸಹಾಯಕ ಎಂಜಿನಿಯರ್ ಚಂದ್ರಶೇಖರ್ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ.
ಲಿಂಗ ಪಟ್ಟಣ ಗ್ರಾಮದ ಪುಟ್ಟಸ್ವಾಮಿ ರವರ ಜಮೀನಿಗೆ ವಿದ್ಯುತ್ ಪರಿವರ್ತಕ ಅಳವಡಿಸಲು ಚಂದ್ರಶೇಖರ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಗ ರೈತ ಪುಟ್ಟಸ್ವಾಮಿ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು .ದುಷ್ಕರ್ಮಿಗಳಿಗೆ ಸಂಸದ ಪ್ರತಾಪ್ ಸಿಂಹರಿಂದ ಪಾಸ್ – ಮೈಸೂರು ನಿವಾಸಿಗೂ ಪಾಸ್
ಲೋಕಾಯುಕ್ತ ಅಧಿಕಾರಿ ಬ್ಯಾಟರಾಯ ಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು ರೈತನಿಂದ 4500 ಹಣ ಸ್ವೀಕರಿಸುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದು, ಲೋಕಾಯುಕ್ತ ಪೊಲೀಸರು ಸಹಾಯಕ ಇಂಜಿನಿಯರ್ ಚಂದ್ರಶೇಖರ್ ನನ್ನು ಬಂಧಿಸಿದ್ದಾರೆ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ