ದುಷ್ಕರ್ಮಿಗಳಿಗೆ ಸಂಸದ ಪ್ರತಾಪ್ ಸಿಂಹರಿಂದ ಪಾಸ್ – ಮೈಸೂರು ನಿವಾಸಿಗೂ ಪಾಸ್

Team Newsnap
1 Min Read

ನವದೆಹಲಿ : ಲೋಕಸಭಾ ಕಲಾಪಕ್ಕೆ ನುಗ್ಗಿದ ಅಪರಿಚಿತರು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್​​​ ಸಿಂಹ ಕಚೇರಿಯಿಂದ ಪಾಸ್​ ಪಡೆದಿರುವ ಮಾಹಿತಿ ಲಭ್ಯವಾಗಿದೆ .

ಈ ಇಬ್ಬರು ಅಪರಿಚಿತರ ಪೈಕಿ ಒಬ್ಬ ಸಾಗರ್ ಶರ್ಮ ಎಂಬಾತನು ಮೈಸೂರಿನ ವಿಜಯನಗರ ಬಡಾವಣೆಯ ನಿವಾಸಿ. ಈತ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದ ಎನ್ನಲಾಗಿದೆ

ಪಾಸ್ ಪಡೆದು ಲೋಕಸಭಾ ವೀಕ್ಷಕರ ಗ್ಯಾಲರಿಗೆ ಎಂಟ್ರಿ ಕೊಟ್ಟಿದ್ದರು. ಆ ಪಾಸ್‌ಗಳನ್ನು ಮೈಸೂರು-ಕೊಡಗು ಸಂಸದರಾಗಿರುವ ಪ್ರತಾಪ್​​​ಸಿಂಹ ಅವರ ಕಚೇರಿಯಿಂದ ಪಡೆದಿದ್ದರು ಲೋಕಸಭೆ ಭದ್ರತಾ ವೈಫಲ್ಯ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.

ಅಪರಿಚಿತರನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಇಬ್ಬರು ಅಪರಿಚಿತರು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್​ ಪಡೆದಿದ್ದರು ಎನ್ನಲಾಗಿದೆ.

ಲೋಕಸಭೆ ಒಳಗೆ ನುಗ್ಗಿರುವ ಇಬ್ಬರು ಅಪರಿಚಿತರು ಮೈಸೂರು-ಕೊಡಗು ಸಂಸದರಾಗಿರುವ ಪ್ರತಾಪ್​​​ಸಿಂಹ ಅವರಿಂದ ಕಾಡಿ ಬೇಡಿ ಪಾಸ್ ಪಡೆದುಕೊಂಡಿದ್ದರು ಎನ್ನಲಾಗಿದೆ.

ಲೋಕಸಭೆಗೆ ನುಗ್ಗಿದ ದುಷ್ಕರ್ಮಿಗಳ ಗುರುತು ಪತ್ತೆಯಾಗಿದೆ.ಲೋಕಸಭೆ ಕಲಾಪದ ವೇಳೆ ಸ್ಫೀಕರ್ ಛೇರ್ ನತ್ತ ನುಗ್ಗಿದ ದುಷ್ಕರ್ಮಿಗಳು – ಭಾರಿ ಆತಂಕ

ಮೈಸೂರು ಮೂಲದ ಇಂಜನಿಯರ್ ಆಗಿರುವ ಮನೋರಂಜನ್ ಮತ್ತು ಸಾಗರ್ ಶರ್ಮ ಎಂದು ಹೇಳಲಾಗಿದೆ

Share This Article
Leave a comment