ಸಚಿವರಾಗಲು ಎಚ್ ವಿಶ್ವನಾಥ್ ಅನರ್ಹ: ಹೈಕೋರ್ಟ್ ತೀರ್ಪು

Team Newsnap
1 Min Read
Village bird 'Vishwanath' Congress inclusion fix in Uttarayana Punyakala ಉತ್ತರಾಯಣ ಪುಣ್ಯಕಾಲದಲ್ಲಿ ಹಳ್ಳಿ ಹಕ್ಕಿ 'ವಿಶ್ವನಾಥ್' ಕಾಂಗ್ರೆಸ್ ಸೇರ್ಪಡೆ ಫಿಕ್ಸ್

ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ 2021ರವರೆಗೆ ಸಚಿವರಾಗಲು ಅನರ್ಹ ಎಂದು ರಾಜ್ಯ ಹೈಕೋರ್ಟ್ ನ ವಿಭಾಗೀಯ ಪೀಠವು ಮಧ್ಯಂತರ ಆದೇಶ ನೀಡಿದೆ.

ಈ ಆದೇಶದಂತೆ ಸಂವಿಧಾನದ ವಿಧಿ 164 (1)(ಬಿ) ಹಾಗೂ 361(ಬಿ) ನಿಯಮಗಳಡಿ ಅನರ್ಹ ಪಕ್ಷಾಂತರ ಮಾಡಿದ್ದ ಹಿನ್ನೆಲೆಯಲ್ಲಿ ಅನರ್ಹಗೊಂಡಿದ್ದ ಶಾಸಕ ಎಚ್. ವಿಶ್ವನಾಥ್ ವಿಧಾನಸಭೆ, ಪರಿಷತ್ತಿಗೆ ಆಯ್ಕೆಯಾಗದೇ ನಾಮಕರಣ ಗೊಂಡಿರುವ ಕಾರಣಕ್ಕಾಗಿ ಅನರ್ಹತೆ ಮುಂದುವರೆದಿದೆ.

ಆರ್ ಶಂಕರ್, ಎಂಟಿಬಿ ನಾಗರಾಜ್ ವಿಧಾನ ಸಭೆಯಿಂದ ಪರಿಷತ್ತಿಗೆ ಆಯ್ಕೆಯಾಗಿದ್ದರಿಂದ ಅವರಿಬ್ಬರೂ ಅನರ್ಹತೆಯ ಶಾಕ್ ನಿಂದ ಪಾರಾಗಿದ್ದಾರೆ.

ಸಚಿವ ಸ್ಥಾನಕ್ಕೆ ವಿಶ್ವನಾಥ್ ಹೆಸರು ಸೂಚಿಸುವ ಮುನ್ನ ಅನರ್ಹತೆ ಪರಿಗಣಿಸುವಂತೆ ರಾಜ್ಯಪಾಲ ರಿಗೆ ನಿರ್ದೇಶನ ನೀಡಲು ಕೋಟ್೯ ನಿರಾಕರಿಸಿದೆ.

ವಿಶ್ವನಾಥ್ ಸಚಿವರಾಗುವ ಅವಕಾಶ ಸಧ್ಯಕ್ಕೆ ಇಲ್ಲದೇ ಇರುವುದರಿಂದ ಎಂಟಿಬಿ ನಾಗಾರಾಜ್ ಹಾಗೂ ಶಂಕರ್ ಗೆ ಅವಕಾಶಗಳು ಒದಗಿಬರಲಿದೆ ಎಂದು ಹೇಳಲಾಗುತ್ತಿದೆ.

Share This Article
Leave a comment