ದಲಿತ ನಾಯಕ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ಎನ್ಸಿಪಿ ನಾಯಕಿ ರೇಷ್ಮಾ ಪಟೇಲ್ಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿ ಗುಜರಾತ್ ಕೋರ್ಟ್ ಆದೇಶಿಸಿದೆ.
ಜುಲೈ 11, 2016ರಲ್ಲಿ ಗುಜರಾತ್ನ ಉನಾದಲ್ಲಿ 7 ಮಂದಿ ದಲಿತ ಯುವಕರ ಮೇಲೆ ಅಮಾನುಷವಾಗಿ ಹಲ್ಲೆ ನಡೆದಿತ್ತು. ಈ ಘಟನೆ ನಡೆದು ಒಂದು ವರ್ಷ ಪೂರೈಸಿದ ದಿನದಂದು ಅಂದರೆ 2017ರಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಅನುಮತಿ ಪಡೆಯದಿರುವ ಆರೋಪ ಮೇವಾನಿ ಹಾಗೂ ಪ್ರತಿಭಟನಾಕಾರರ ಮೇಲಿತ್ತು.
ಪ್ರತಿಭಟನಾ ಮೆರವಣಿಗೆಗೆ ಅನುಮತಿ ಪಡೆಯದಿರುವ ವಿಚಾರದಲ್ಲಿ ಗುಜರಾತ್ ಕೋರ್ಟ್ ಒಟ್ಟು 11 ಆರೋಪಿಗಳು ತಪ್ಪಿತಸ್ಥರು ಎಂದು ಹೇಳಿದೆ. ಮಾತ್ರಲ್ಲ ಮೂರು ತಿಂಗಳ ಜೈಲು ಹಾಗೂ ತಲಾ ಒಂದು ಸಾವಿರ ರೂಪಾಯಿ ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್
ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ: ಜು. 7 ರಂದು ಬಜೆಟ್ ಮಂಡನೆ