December 26, 2024

Newsnap Kannada

The World at your finger tips!

gujarat high court

ಗುಜರಾತ್ ಹೈಕೋರ್ಟಿನಲ್ಲಿ ವಕೀಲರೊಬ್ಬರಿಗೆ ಕನ್ನಡದಲ್ಲೇ ‘ಮಂಗಳಾರತಿ’ ಮಾಡಿದ ಸಿಜೆ ಅರವಿಂದ್ ಕುಮಾರ್

Spread the love

ಇದೊಂದು ಅಪರೂಪದ ಘಟನೆ. ಗುಜರಾತ್ ಹೈಕೋರ್ಟಿನಲ್ಲಿ ಮುಖ್ಯ ನ್ಯಾಯಾಧೀಶರಾಗಿರುವ ಅರವಿಂದ್ ಕುಮಾರ್ ಅವರು ವಕೀಲರೊಬ್ಬರಿಗೆ ಕನ್ನಡದಲ್ಲೇ ಮಂಗಳಾರತಿ ಮಾಡಿ, ಕನ್ನಡದ ಪತಾಕಿ ಹಾರಿಸಿದ್ದಾರೆ

ಹೈಕೋರ್ಟ್ ಕಲಾಪದ ವೇಳೆ ವಕೀಲರು ಗುಜರಾತಿ ಭಾಷೆಯಲ್ಲಿ ವಾದ ಮಂಡಿಸಲು ಮುಂದಾಗುತ್ತಾರೆ . ಪೀಠದ ಮತ್ತೊಬ್ಬ ನ್ಯಾಯಾಧೀಶರು ನಿಮ್ಮ ವಾದವನ್ನು ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಮಂಡಿಸಲು ಹೇಳಿದಾಗಲೂ ಕೂಡ ಗುಜರಾತಿಯಲ್ಲೇ ವಾದ ಮಂಡಿಸಲು ಮುಂದಾಗುತ್ತಾರೆ.

ಆಗ ಮದ್ಯ ಪ್ರವೇಶ ಮಾಡಿದ ಸಿಜೆ ನೀವು ಗುಜರಾತಿಯಲ್ಲಿ ವಾದ ಮಂಡಿಸುತ್ತೀರಾ ಎಂದು ಪ್ರಶ್ನೆ ಮಾಡುತ್ತಾರೆ. ಹೌದು ಇದು ಗುಜರಾತ್ ರಾಜ್ಯ ನಮ್ಮ ಭಾಷೆ ಹೇಳುತ್ತೇವೆ ಎಂದಾಗ ಸಿಜೆ ಅರವಿಂದ್ ಕುಮಾರ್ ಅವರಿಗೆ ತುಸು ಕೋಪದಿಂದೇ ಹೇಳುತ್ತಾರೆ

ಕೋರ್ಟ್ ಕಲಾಪದ ವೇಳೆಯಲ್ಲೇ ಕನ್ನಡದಲ್ಲಿ ಮಾತು ಆರಂಭಿಸಿದ ಸಿಜೆ ನಮಗೆ ಅರ್ಥವಾಗದ ಭಾಷೆಯಲ್ಲಿ ಮಾತನಾಡಿದರೆ ನಮಗೆ ಗೊತ್ತಾಗುವುದಿಲ್ಲ. ಹೇಳುವುದಾದರೆ ಕನ್ನಡದಲ್ಲೇ ಹೇಳಿ ಎಂದು ಸಿಜೆ ಏರು ದನಿಯಲ್ಲಿ ವಕೀಲರಿಗೆ ತಾಕೀತು ಮಾಡುತ್ತಾರೆ .

ಆ ಕಲಾಪದ ವಿಡಿಯೋ ತುಣುಕು ಕೇಳಿ. ಗುಜರಾತಿನಲ್ಲಿ ಕನ್ನಡದ ಕಂಪು ಹೇಗೆ ಪಸರಿಸಿದೆ ಅದು ಮುಖ್ಯ ನ್ಯಾಯಾಧೀಶರ ಮಾತುಗಳಲ್ಲಿ ಕೇಳಿ.

Copyright © All rights reserved Newsnap | Newsever by AF themes.
error: Content is protected !!