ಏಪ್ರಿಲ್ ನಲ್ಲಿ ಜಿಎಸ್‌ಟಿ 1.68 ಲಕ್ಷ ಕೋಟಿ ರು ದಾಖಲೆ ಸಂಗ್ರಹ

Team Newsnap
1 Min Read
Center bowed to people's opposition – GST exemption on 14 items including rice, curd ಜನರ ವಿರೋಧಕ್ಕೆ ಮಣಿದ ಕೇಂದ್ರ – ಅಕ್ಕಿ, ಮೊಸರು ಸೇರಿದಂತೆ 14 ವಸ್ತುಗಳ ಮೇಲೆ ಜಿಎಸ್‍ಟಿ ವಿನಾಯಿತಿ #Thenewsnap #Latestnews #India #Central_Government #Indian_government #GST #Bengaluru

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹವು ಏಪ್ರಿಲ್ ತಿಂಗಳಲ್ಲಿ ಹೊಸ ದಾಖಲೆ ಬರೆದಿದೆ, ತೆರಿಗೆ ಸಂಗ್ರಹವು ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 1.5 ಲಕ್ಷ ಕೋಟಿ ದಾಟಿದೆ.

ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 1.68 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ ಇದು ಕಳೆದ ವರ್ಷದ ಏಪ್ರಿಲ್ ತಿಂಗಳಿಗಿಂತ ಶೇ 20 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಏಪ್ರಿಲ್ 2022 ರಲ್ಲಿ ಜಿಎಸ್ ಟಿ ಆದಾಯವು ಒಟ್ಟು 1,67,540 ಕೋಟಿ ರು ಸಂಗ್ರಹವಾಗಿದೆ.

ಇದರಲ್ಲಿ ಸಿಜಿಎಸ್ ಟಿ 33,159 ಕೋಟಿ ರೂಪಾಯಿ, ಎಸ್ ಜಿಎಸ್ ಟಿ 41,793 ಕೋಟಿ ರು

ಐಜಿಎಸ್ ಟಿ 81,939 ಮತ್ತು ಮತ್ತು ಪರಿಹಾರ ಸೆಸ್ Rs 10,649 ಕೋಟಿ ರೂ. ಎಂದು ತಿಳಿಸಲಾಗಿದೆ.

ಕಳೆದ ಮಾರ್ಚ್ ನಲ್ಲಿ 1,42,095 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಇದು ಸಹ ಟಿ ಸಾರ್ವಕಾಲಿಕ ಗರಿಷ್ಠ ಸಂಗ್ರವಾಗಿದೆ ಜನವರಿಯಲ್ಲಿ ಸಂಗ್ರಹಿಸಲಾದ 1,40,986 ಕೋಟಿ ರೂ.ಗಳ ಹಿಂದಿನ ದಾಖಲೆಯನ್ನು ಮುರಿದಿತ್ತು.

Share This Article
Leave a comment