ನ್ಯೂಸ್ ಸ್ನ್ಯಾಪ್.
ಬೆಂಗಳೂರು.
ಅಂತೂ ಇಂತೂ ರಾಜ್ಯದ ಗ್ರಾಪಂಗಳ ಚುನಾವಣೆ ನಡೆಸುವ ಸಿದ್ದತೆ ಮಾಡಿರುವ ರಾಜ್ಯ ಚುನಾವಣಾ ಆಯೋಗ ಕೂಸು ಹುಟ್ಟುವ ಮುನ್ನವೇ ಕುಲಾವಿ ರೆಡಿ ಮಾಡಿದರು ಎಂಬಂತೆ ಕೋವಿಡ್ ಕಾರಣಕ್ಕಾಗಿ ಚುನಾವಣೆ ವೇಳೆ ಹೇಗೆ ನಡೆದು ಕೊಳ್ಳಬೇಕು ಎಂಬುದರ ಬಗ್ಗೆ ಕೆಲವು ಮಾರ್ಗದಶರ್ಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಅಗಸ್ಟ್ 18 ರಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಚುನಾವಣಾ ಆಯೋಗ ಸೂತ್ರಗಳನ್ನು ಪ್ರಕಟಿಸಿದೆ.
- ಕೋವಿಡ್ ಪೀಡಿತರೂ ಕೂಡ ಚುನಾವಣೆಯಲ್ಲಿ ಸ್ಪಧರ್ೆ ಮಾಡಬಹುದು.
- ಪ್ರಚಾರದ ವೇಳೆ ಅಭ್ಯಥರ್ಿ ಜೊತೆಯಲ್ಲಿ ಐದು ಮಂದಿಗೆ ಮಾತ್ರ ಅವಕಾಶ
- ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
- ಚುನಾವಣೆಯಲ್ಲಿ ಗೆದ್ದ ಮೇಲೆ ವಿಜಯೋತ್ಸವ ಆಚರಿಸುವಂತಿಲ್ಲ.
- ನಾಮಪತ್ರ ಸ್ವೀಕರಿಸುವ ಮತ್ತು ನಾಮಪತ್ರ ನೀಡುವ ಅಭ್ಯಥರ್ಿಗೆ ಸ್ಯಾನಿಟೈಜರ್ ಕಡ್ಡಾಯ
- ಮಾಸ್ಕ್ ಹಾಗೂ ಕೈ ಗವಸು ಕಡ್ಡಾಯ. ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ 6 ಅಡಿ ಅಂತರ ಇರಲೇಬೇಕು.
- ಸೋಂಕು ಪೀಡಿತರಾಗಿದ್ದರೆ ಸೂಚಕರ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ.
- ಚುನಾವಣೆಯ ಪ್ರಚಾರಕ್ಕೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಿಲ್ ಮಾಧ್ಯಮ ಬಳಕೆ ಉತ್ತಮ
- ಗುಂಪು ಪ್ರಚಾರ ಹಾಗೂ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ.
- ಒಂದು ಮತಗಟ್ಟೆಗೆ ಗರಿಷ್ಠ 1 ಸಾವಿರ ಮತದಾರರು ಮಾತ್ರ
- ವಿಜೇತ ಅಭ್ಯಥರ್ಿಗಳಿಗೆ ದೃಢಿಕರಣ ಪತ್ರ ನೀಡುವಾಗ ಯಾವುದೇ ಕಾರಣಕ್ಕೂ ಹಸ್ತ ಲಾಘವ ಮಾಡುವಂತಿಲ್ಲ
More Stories
ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ