ಗ್ರಾ ಪಂ ಚುನಾವಣೆ ಸುಸೂತ್ರ: ಮೂರು ತಾಲೂಕುಗಳಲ್ಲಿ ಶೇ. 85.96 ಮತದಾನ

Team Newsnap
1 Min Read

ಮಂಡ್ಯ ದಲ್ಲಿ 4010 ಅಭ್ಯರ್ಥಿ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ, ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತಕ್ಕೆ ಮೂರು ತಾಲೂಕುಗಳಲ್ಲಿ 124 ಗ್ರಾ ಪಂಗಳಿಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ಶಾಂತಿಯುತವಾಗಿ ನಡೆಯಿತು.

ಮಂಡ್ಯ ತಾಲೂಕಿನಲ್ಲಿ ಶೇ 86 21, ಮದ್ದೂರು – ಶೇ. 87.03 ಹಾಗೂ ಮಳವಳ್ಳಿ – ಶೇ 84.53 ರಷ್ಟು ಮತದಾನವಾಗಿದೆ. ಮೂರು ತಾಲೂಕುಗಳ 124 ಗ್ರಾಪಂಗಳಲ್ಲಿ 2011 ಸ್ಥಾನಗಳಿವೆ. ಇದರಲ್ಲಿ ಈಗಾಗಲೇ 364 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಉಳಿದ 1746 ಸ್ಥಾನಗಳಿಗೆ ಮತದಾನ ನಡೆಯಿತು.

  1. 67 ಲಕ್ಷ ಮತದಾರರಿಂದ ಹಕ್ಕು ಚಲಾವಣೆ:

ಜಿಲ್ಲೆಯಲ್ಲಿ ಒಟ್ಟು 13 ,47, 466 ಮತದಾರರಿದ್ದಾರೆ. ಮೊದಲ ಹಂತದ ಮಂಡ್ಯ ತಾಲೂಕಿನಲ್ಲಿ ಪುರುಷರು 1, 16, 001 ಮಹಿಳೆಯರು 1,16, 990 ಇತರೆ 35, ಮದ್ದೂರು ತಾಲೂಕಿನಲ್ಲಿ 1,12,672 ಪುರುಷರು, 1,15,699 ಮಹಿಳೆಯರು, 20 ಇತರೆ ಹಾಗೂ ಮಳವಳ್ಳಿ ತಾಲೂಕಿನ1,04,521 ಮಹಿಳೆಯರು,1, 01, 815 ಪುರುಷರು, ಇತರೆ 10 ಮತದಾರರಿದ್ದರು. ಮೊದಲ ಹಂತದಲ್ಲಿ ಒಟ್ಟು 6,67,853, ಮಂದಿ ಮತದಾನ ಹಕ್ಕು ಹೊಂದಿದ್ದರು.

1025ಮತಗಟ್ಟೆ:

ಮೊದಲ ಹಂತದ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳಲ್ಲಿ 1025 ಮತಗಟ್ಟೆ ಕೇಂದ್ರಗಳಿವೆ. ಮಂಡ್ಯ 348 ಮದ್ದೂರು 349 ಹಾಗೂ ಮಳವಳ್ಳಿಯಲ್ಲಿ 328 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

Share This Article
Leave a comment