ಜಿಪಂ ಮತ್ತು ತಾಪಂ ಚುನಾವಣೆಗೆ ಸಿದ್ದತೆಗಳನ್ನು ಆರಂಭಿಸಿರುವ ಸರ್ಕಾರ , ಈ ಮೊದಲಿಗೆ ನಿಗದಿ ಮಾಡಲಾಗಿದ್ದ ಕ್ಷೇತ್ರ ವಿಂಗಡನೆ ಹಾಗೂ ಮೀಸಲಾತಿ ರದ್ದು ಪಡಿಸಿ ಹೊಸದಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ಷೇತ್ರಗಳ ವಿಂಗಡನೆ ಸೀಮೆಗಳನ್ನು ನಿಗದಿ ಪಡಿಸಲು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವೇ ಇನ್ನು ತಾಪಂ – ಜಿಪಂಗಳ ಕ್ಷೇತ್ರದ ಸೀಮೆ ಹಾಗೂ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ.
ಈ ಮೊದಲು ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ವಿಂಗಡಣೆಯ ವ್ಯಾಪ್ತಿ , ಮೀಸಲಾತಿ ನಿಗದಿ ಮಾಡುವಂತಹ ಕೆಲಸಗಳನ್ನು ಚುನಾವಣಾ ಆಯೋಗ ಮಾಡುತ್ತಿತ್ತು, ಈಗ ಆ ಎಲ್ಲಾ ಕೆಲಸಗಳನ್ನು ಸೀಮಾ ಅಯೋಗವೇ ಮಾಡಲಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು