‘PDO’ಗಳ ಹುದ್ದೆ ಉನ್ನತೀಕರಣ, ಸಿಕ್ಕಾಪಟ್ಟೆ ವೇತನವೂ ಹೆಚ್ಚಳ ಮಾಡಿದ ಸರ್ಕಾರ

Team Newsnap
1 Min Read

ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ( PDO ) ಹಿರಿಯ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಎಂದು ಉನ್ನತೀಕರಣ ಮಾಡಿದೆ.
ಈ ಹುದ್ದೆಯ ಉನ್ನತೀಕರಣದ ಜೊತೆ ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ನೀಡಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ

ಇಲಾಖೆಯ ಅಡಿಯಲ್ಲಿ ಮಂಜೂರಾಗಿರುವ 6021 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿರಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಣ ಮಾಡಲಾಗಿದೆ. ಅಲ್ಲದೇ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ ಎಂದಿದ್ದಾರೆ. ಅಪ್ರಾಪ್ತ ಮಗನಿಗೆ ಬೈಕ್‌ ಓಡಿಸಲು ಕೊಟ್ಟ ತಂದೆಗೆ 25 ಸಾವಿರ ರು ದಂಡ

ಪಿಡಿಓಗಳ ಉನ್ನತೀಕರಣ, ಪುನರ್ ಪದನಾಮೀಕರಿಸಿದ ನಂತರ ವೇತನ ಶ್ರೇಣಿಯನ್ನು ರೂ.37,900 ರಿಂದ 70,850 ಇದ್ದದ್ದನ್ನು ಗ್ರೂಪ್ ಸಿ ವೃಂದದ 1500 ಪಿಡಿಓಗಳಿಗೆ ತಕ್ಷಣದಿಂದ ಅನ್ವಯವಾಗುವಂತೆ ವೇತನ ಶ್ರೇಣಿ ರೂ.40,900 ರಿಂದ 78,2000ಕ್ಕೆ ಹೆಚ್ಚಿಸಲಾಗಿದೆ.

ಇದಲ್ಲದೇ ಉಳಿದ 4521 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶ್ರೇಣಿ ರೂ 37,900 ರಿಂದ 70,850 ಮುಂದುವರೆಸಲಾಗಿದೆ. ಹಿರಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೃಂದಗಳಿಗೆ ನೇಮಕಾತಿ ಕಾರ್ಯವಿಧಾನವನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. PSI ನೇಮಕಾತಿ ಅಕ್ರಮ: ಎಡಿಜಿಪಿ ಅಮೃತ್ ಪಾಲ್ , DYSP ಶಾಂತಕುಮಾರ್ ನಿವಾಸದ ಮೇಲೆ ಇಡಿ ದಾಳಿ

Share This Article
Leave a comment