ಅಪ್ರಾಪ್ತ ಮಗನಿಗೆ ಬೈಕ್‌ ಓಡಿಸಲು ಕೊಟ್ಟ ತಂದೆಗೆ 25 ಸಾವಿರ ರು ದಂಡ

Team Newsnap
1 Min Read
Canada bans foreigners from buying houses ವಿದೇಶಿಯರಿಗೆ ಮನೆ ಖರೀದಿಗೆ ನಿಷೇಧ ಹೇರಿದʻಕೆನಡಾ

ಅಪ್ರಾಪ್ತ ಬಾಲಕನಿಗೆ ಬೈಕ್ ಓಡಿಸಲು ಕೊಟ್ಟ ತಂದೆಗೆ ಕೋರ್ಟ್ 25 ಸಾವಿರ ರು ದಂಡ (Fine) ವಿಧಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.

ಕಳೆದ ಅ. 18ರಂದು ತೀರ್ಥಹಳ್ಳಿ ಪಟ್ಟಣದಲ್ಲಿ 16 ವರ್ಷದ ಬಾಲಕ ಹೆಲ್ಮೆಟ್ ಧರಿಸದೇ, ವಾಹನ ಚಾಲನೆ ಮಾಡುತ್ತಿದ್ದ. ಆ ಬಾಲಕನಿಗೆ ಪರವಾನಗಿ ಹೊಂದದೇ ಬೈಕ್ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ. ಇದನ್ನು ನೋಡಿದ ಪೊಲೀಸರು ಆತನನ್ನು ತಡೆದಿದ್ದಾರೆ.ಶಿವಾನಂದಮೂರ್ತಿ ADC – ಐಶ್ವರ್ಯ ಮಂಡ್ಯ ಮೂಡಾ ಆಯುಕ್ತೆ ಸೇರಿ ಐವರು KAS ಅಧಿಕಾರಿಗಳ ನೇಮಕ

ಬಾಲಕನಿಗೆ ಬೈಕ್ ನೀಡಿ ಚಾಲನೆ ಮಾಡಲು ಅವಕಾಶ ನೀಡಿದ್ದ ಆತನ ತಂದೆ ಆಸೀಫ್ ಪಾಷಾ ವಿರುದ್ದ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಬೈಕ್ ಓಡಿಸಿದ ಬಾಲಕನ ತಂದೆಗೆ ದಂಡ ವಿಧಿಸಿದೆ.

Share This Article
Leave a comment