6 ಐಪಿಎಸ್ ಅಧಿಕಾರಿ’ಗಳ ವರ್ಗಾವಣೆ ಮಾಡಿದ ಸರ್ಕಾರ

Team Newsnap
1 Min Read

ರಾಜ್ಯದಲ್ಲಿ ಆರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಈ ಕುರಿತಂತೆ ಕಲಬುರ್ಗಿಯ ಡಿಐಜಿ ಮತ್ತು ಕಮೀಷನ್ ಆಫ್ ಪೊಲೀಸ್ ಆಗಿದ್ದಂತ ಡಾ.ವೈ ಎಸ್ ರವಿ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಡೈರೆಕ್ಟರೇಟ್ಸ್ ಆಫ್ ಸಿವಿಲ್ ರೈಟ್ಸ್ ನ ಡಿಜಿಪಿಯಾಗಿ ನೇಮಕ ಮಾಡಿದೆ.ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ- ಯುವಕರಿಗೆ ಪ್ರಧಾನಿ ಕರೆ

ಇನ್ನೂ ಸ್ಥಳ ನಿಯೋಜನೆಯ ನಿರೀಕ್ಷೆಯಲ್ಲಿದ್ದ ಡಾ.ದಿವ್ಯ ವಿ ಗೋಪಿನಾಥ್ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಇಂಟೆಲಿಜೆನ್ಸ್ ವಿಭಾಗದ ಎಸ್ಪಿಯಾಗಿದ್ದಂತ ಚೇತನ್ ಆರ್ ಅವರನ್ನು ಕಲಬುರ್ಗಿ ನಗರದ ಕಮೀಷನರ್ ಆಫ್ ಪೊಲೀಸ್ ಆಗಿ ನೇಮಿಸಿದೆ. ಹಾವೇರಿ ಎಸ್ಪಿಯಾಗಿದ್ದ ಹನುಮಂತರಾಯ ಅವರನ್ನು ಇಂಟೆಲಿಜೆನ್ಸ್ ವಿಭಾಗದ ಸೂಪರಿಡೆಂಟ್ ಆಗಿ ನೇಮಕ ಮಾಡಲಾಗಿದೆ.

ಇಂಟೆಲಿಜೆನ್ಸ್ ಎಸ್ಪಿಯಾಗಿದ್ದಂತ ನಾರಾಯಣ ಎಂ ಅವರನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಇಟೆಲಿಜೆನ್ಸ್ ಎಸ್ಪಿಯಾಗಿದ್ದಂತ ಡಾ.ಶಿವಕುಮಾರ್ ಅವರನ್ನು ಹಾವೇರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ.

Share This Article
Leave a comment