ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ- ಯುವಕರಿಗೆ ಪ್ರಧಾನಿ ಕರೆ

Team Newsnap
1 Min Read

ದೇಶದ ಭವಿಷ್ಯ ಯುವಕರ ಮೇಲೆ ನಿಂತಿದೆ. ಇಂದು ಯುವಕರಿಗೆ ಬಹಳ ವಿಶೇಷ ದಿನ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ. ಎಂದು ಯುವಕರಿಗೆ ಪ್ರಧಾನಿ ಮೋದಿ ಕರೆ ನೀಡಿದರು

ಹುಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ಗುರುವಾರ ನಡೆದ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಿದ ನರೇಂದ್ರ ಮೋದಿಯವರು, ಕನ್ನಡ ನಾಡು, ನುಡಿ, ಜನ, ಸಂಸ್ಕೃತಿಯನ್ನು ನೆನೆದರು.

ಇಂದು ಸ್ವಾಮಿ ವಿವೇಕಾನಂದರ ಹುಟ್ಟಿದ ದಿನ. ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದಲೇ ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮದು ಶೇ.40ಕ್ಕೂ ಹೆಚ್ಚು ಯುವಕರು ಇರೋ ದೇಶ ಎಂದರು. ಫೆ.17 ರಂದು ರಾಜ್ಯ ಬಜೆಟ್ : ಜನಪ್ರಿಯ ಯೋಜನೆಗಳ ಘೋಷಣೆ ನಿರೀಕ್ಷೆ

ಸ್ವಾಮಿ ವಿವೇಕಾನಂದರಿಗೆ ಕರ್ನಾಟಕದೊಂದಿಗೆ ಒಳ್ಳೆಯ ಸಂಬಂಧ ಇತ್ತು. ಬೆಂಗಳೂರಿಗೆ ಹೋದಾಗ ವಿವೇಕಾನಂದರ ಯಾತ್ರೆ ಹುಬ್ಬಳ್ಳಿಗೂ ಬಂದಿತ್ತು. ವಿವೇಕಾನಂದರ ಚಿಕಾಗೋ ಯಾತ್ರೆ ಸ್ಮರಣೀಯ. ಇಡೀ ದೇಶ ಈ ಸಂದರ್ಭದಲ್ಲಿ ಹೊಸ ಸಂಕಲ್ಪದೊಂದಿಗೆ ಮುಂದೆ ಸಾಗಬೇಕಿದೆ. ವಿವೇಕಾನಂದರು ಹೇಳಿದ ಹಾಗೇ ಯುವಕರಿಂದಲೇ ದೇಶ ಎಂದು ಕರೆ ನೀಡಿದ್ರು.

ಯುವರು ಕರ್ತವ್ಯ ಅರಿತು, ದೇಶವನ್ನು ಮುನ್ನಡೆಸಬೇಕು. ಇದಕ್ಕೆ ಸ್ವಾಮಿ ವಿವೇಕಾನಂದರೇ ಪ್ರೇರಣೆ ಆಗಿರಬೇಕು. ಇತ್ತೀಚೆಗೆ ಕರ್ನಾಟಕ ಕಂಡ ಸಿದ್ದೇಶ್ವರ ಸ್ವಾಮಿಗಳು ನಿಧನರಾಗಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದು ಸ್ಮರಿಸಿದರು.

ಸಿದ್ದಾರೂಢ ಮಠ ಸೇರಿದಂತೆ ಮೂರು ಸಾವಿರ ಮಠಗಳಿಗೆ ನನ್ನ ನಮಸ್ಕಾರ. ಹುಬ್ಬಳ್ಳಿ ರಾಣಿ ಚೆನ್ನಮ್ಮನ ನಾಡು, ರಾಯಣ್ಣನ ಬೀಡು. ಕರ್ನಾಟಕ ಸಂಸ್ಕೃತಿ ಮತ್ತು ಜ್ಞಾನಕ್ಕೆ ಹೆಸರುವಾಸಿ ಆಗಿದೆ. ಇಲ್ಲಿಂದ ದೇಶಕ್ಕೆ ಸಾಕಷ್ಟು ಸಂಗೀತ ಮಹನೀಯರು ಸಿಕ್ಕಿದ್ದಾರೆ. ಮಲ್ಲಿಕಾರ್ಜುನ ಮಾನ್ಸೂರ್, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಸೇರಿದಂತೆ ಅನೇಕ ಸಂಗೀತ ಮಹನೀಯರು ಬಂದ ನಾಡು ಇದು ಎಂದು ಕೊಂಡಾಡಿದರು.

Share This Article
Leave a comment