3 ವರ್ಷಗಳಲ್ಲಿ ಇದೇ ಮೊದಲೇ ಬಾರಿಗೆ ರಾಜ್ಯದಲ್ಲಿ ಕೊರೊನಾ ನಂತರ ಸರಿಯಾದ ಸಮಯಕ್ಕೆ ಶಾಲೆ ಆರಂಭವಾಗುತ್ತಿವೆ, ಇಂದಿನಿಂದ ಸರ್ಕಾರಿ ಶಾಲೆಗಳು ಆರಂಭವಾಗಲಿವೆ , ಮಕ್ಕಳನ್ನು ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸಜ್ಜಾಗಿದೆ.
ಕೊರೊನಾ ರಜೆ ಮೂಡ್ನಿಂದ ಹೊರ ಬಂದು ವಿದ್ಯಾರ್ಥಿಗಳು ಹೆಗಲಿಗೆ ಬ್ಯಾಗ್ಹಾಕಿಕೊಂಡು ಶಾಲೆ ಕಡೆ ಹೊರಡಲು ತಯಾರಾಗಿದ್ದಾರೆ.
ರಾಜ್ಯಾದ್ಯಂತ ಇಂದಿನಿಂದ 2022 -23ನೇ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ . 1 ರಿಂದ 10ನೇ ತರಗತಿಯವರೆಗೆ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಹೀಗಾಗಿ ಇಂದಿನಿಂದ ಕೋವಿಡ್ ನಿಯಮಗಳನ್ನ ಅನುಸರಿಸಿ ತರಗತಿಗಳು ನಡೆಯಲಿವೆ.
ಮೊದಲ ದಿನದಿಂದಲೇ ಕ್ಷೀರಭಾಗ್ಯ, ಬಿಸಿಯೂಟ ಸಹ ದೊರೆಯಲಿದ್ದು, ಸುರಕ್ಷತೆ ಪರಿಶೀಲನೆಗೆ ಶಿಕ್ಷಣ ಸಚಿವರು ಸೂಚಿಸಿದ್ದಾರೆ. ಇನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಹಳೆಯ ಪಾಸ್ ಬಳಸಿ ಪ್ರಯಾಣ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅನುಮತಿ ನೀಡಿದೆ.
ಇದನ್ನು ಓದಿ :ಕೇರಳದಲ್ಲಿ ಭಾರೀ ಮಳೆ : 14 ವರ್ಷಗಳ ನಂತರ ಮೇ ನಲ್ಲೂ KRS ನಲ್ಲಿ 100 ಅಡಿ ನೀರು
ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಶಾಲೆಗಳಿಗೆ ಸ್ವಾಗತಿಸಲು ಶಿಕ್ಷಣ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆ ಜಿಲ್ಲೆಯಾದ್ಯಂತ 1,47,081 ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಲಿದ್ದಾರೆ. ಶಾಲೆಗಳಲ್ಲಿ ಹಬ್ಬದ ವಾತವರಣ ನಿರ್ಮಿಸಲಾಗಿದೆ. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ತಳಿರು ತೋರಣಗಳಿಂದ ಶಾಲೆಗಳನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಗುಲಾಬಿ ನೀಡಿ, ಮಕ್ಕಳ ಮೇಲೆ ಪುಷ್ಪವೃಷ್ಟಿ ಹರಿಸಿ ಶಿಕ್ಷಕರು ಬರಮಾಡಿಕೊಳ್ಳಲಿದ್ದಾರೆ.
- KRS ಭರ್ತಿಗೆ 10 ಅಡಿ ಬಾಕಿ : ಜಲಾಶಯಕ್ಕೆ 29 ಸಾವಿರ ಕ್ಯೂಸೆಕ್ ಒಳಹರಿವು
- ಈ ವರ್ಷಾಂತ್ಯಕ್ಕೆ ಬೈಯಪ್ಪನಹಳ್ಳಿ- ವೈಟ್ಫೀಲ್ಡ್ ಮೆಟ್ರೋ ಸೇವೆ ಆರಂಭ
- ಚಂದ್ರಶೇಖರ ಗುರೂಜಿ ಮೂಲ ಬಾಗಲಕೋಟೆ, ವಾಸ ಮುಂಬೈ – ಸಾವಿರಾರು ಕೋಟಿ ಒಡೆಯನ ಅಂತ್ಯಕ್ರಿಯೆ ಇಂದು
- ಬೆಂಗಳೂರು ನಗರ ಮಾಜಿ DC ಮಂಜುನಾಥ್ ಫ್ಲ್ಯಾಟ್ ಮೇಲೆ ACB ದಾಳಿ: 30 ಎಕರೆ ಜಮೀನು ದಾಖಲೆ ಪತ್ತೆ
- ಗುರುವನ್ನೇ ಹತ್ಯೆ ಮಾಡಿದ ಇಬ್ಬರು ಪಾಪಿಗಳನ್ನು ಪೋಲಿಸರು ಬಂಧಿಸಿದ್ದೇ ರೋಚಕ ಕಥೆ
More Stories
ಬೆಂಗಳೂರು ನಗರ ಮಾಜಿ DC ಮಂಜುನಾಥ್ ಫ್ಲ್ಯಾಟ್ ಮೇಲೆ ACB ದಾಳಿ: 30 ಎಕರೆ ಜಮೀನು ದಾಖಲೆ ಪತ್ತೆ
ಗುರುವನ್ನೇ ಹತ್ಯೆ ಮಾಡಿದ ಇಬ್ಬರು ಪಾಪಿಗಳನ್ನು ಪೋಲಿಸರು ಬಂಧಿಸಿದ್ದೇ ರೋಚಕ ಕಥೆ
40 ಸೆಕೆಂಡಿನಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ ಆಸ್ತಿಗಾಗಿ ಗುರೂಜಿ ಕೊಲೆ: ವನಜಾಕ್ಷಿ ಬಂಧನ