November 16, 2024

Newsnap Kannada

The World at your finger tips!

school , learning , teaching

ಸರ್ಕಾರಿ ಶಾಲೆಗಳು ಇಂದಿನಿಂದ ಆರಂಭ : ಮಕ್ಕಳಲ್ಲಿ ಹೊಸ ಹುರುಪು

Spread the love

3 ವರ್ಷಗಳಲ್ಲಿ ಇದೇ ಮೊದಲೇ ಬಾರಿಗೆ ರಾಜ್ಯದಲ್ಲಿ ಕೊರೊನಾ ನಂತರ ಸರಿಯಾದ ಸಮಯಕ್ಕೆ ಶಾಲೆ ಆರಂಭವಾಗುತ್ತಿವೆ, ಇಂದಿನಿಂದ ಸರ್ಕಾರಿ ಶಾಲೆಗಳು ಆರಂಭವಾಗಲಿವೆ , ಮಕ್ಕಳನ್ನು ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸಜ್ಜಾಗಿದೆ.

ಕೊರೊನಾ ರಜೆ ಮೂಡ್​ನಿಂದ ಹೊರ ಬಂದು ವಿದ್ಯಾರ್ಥಿಗಳು ಹೆಗಲಿಗೆ ಬ್ಯಾಗ್​ಹಾಕಿಕೊಂಡು ಶಾಲೆ ಕಡೆ ಹೊರಡಲು ತಯಾರಾಗಿದ್ದಾರೆ.

ರಾಜ್ಯಾದ್ಯಂತ ಇಂದಿನಿಂದ 2022 -23ನೇ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ . 1 ರಿಂದ 10ನೇ ತರಗತಿಯವರೆಗೆ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಹೀಗಾಗಿ ಇಂದಿನಿಂದ ಕೋವಿಡ್​ ನಿಯಮಗಳನ್ನ ಅನುಸರಿಸಿ ತರಗತಿಗಳು ನಡೆಯಲಿವೆ.

ಮೊದಲ ದಿನದಿಂದಲೇ ಕ್ಷೀರಭಾಗ್ಯ, ಬಿಸಿಯೂಟ ಸಹ ದೊರೆಯಲಿದ್ದು, ಸುರಕ್ಷತೆ ಪರಿಶೀಲನೆಗೆ ಶಿಕ್ಷಣ ಸಚಿವರು ಸೂಚಿಸಿದ್ದಾರೆ. ಇನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಹಳೆಯ ಪಾಸ್​ ಬಳಸಿ ಪ್ರಯಾಣ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅನುಮತಿ ನೀಡಿದೆ.

ಇದನ್ನು ಓದಿ :ಕೇರಳದಲ್ಲಿ ಭಾರೀ ಮಳೆ : 14 ವರ್ಷಗಳ ನಂತರ ಮೇ ನಲ್ಲೂ KRS ನಲ್ಲಿ 100 ಅಡಿ ನೀರು

ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಶಾಲೆಗಳಿಗೆ ಸ್ವಾಗತಿಸಲು ಶಿಕ್ಷಣ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಆ ಜಿಲ್ಲೆಯಾದ್ಯಂತ 1,47,081 ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಲಿದ್ದಾರೆ. ಶಾಲೆಗಳಲ್ಲಿ ಹಬ್ಬದ ವಾತವರಣ ನಿರ್ಮಿಸಲಾಗಿದೆ. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ತಳಿರು ತೋರಣಗಳಿಂದ ಶಾಲೆಗಳನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಗುಲಾಬಿ ನೀಡಿ, ಮಕ್ಕಳ ಮೇಲೆ ಪುಷ್ಪವೃಷ್ಟಿ ಹರಿಸಿ ಶಿಕ್ಷಕರು ಬರಮಾಡಿಕೊಳ್ಳಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!