ಯೋಗವನ್ನು ಪ್ರತಿದಿನ ನಿರಂತರವಾಗಿ ಮಾಡಿದರೆ ಯಾವುದೇ ಖಾಯಿಲೆ ಬರುವುದಿಲ್ಲ. ಉತ್ತಮ ಆರೋಗ್ಯದೊಂದಿಗೆ ನಗು ಮುಖದಿಂದ ಇರಲು ಸಾಧ್ಯವಾಗುತ್ತದೆ ಎಂದು ರೇಷ್ಮೆ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ. ಕೆ.ಸಿ.ನಾರಾಯಣಗೌ ಮಂಗಳವಾರ ತಿಳಿಸಿದರು.
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾರತ ಸರ್ಕಾರ, ಆಯುಷ್ ಸಚಿವಾಲಯ, ಕರ್ನಾಟಕ ಸರ್ಕಾರ,ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಜಿಲ್ಲೆಯ ಯೋಗ ನಿರತ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಡೆದ 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.
ಇದನ್ನು ಓದಿ – ಮೈಸೂರಿನಲ್ಲಿ ನಮೋ ಯೋಗ: 15 ಸಾವಿರ ಯೋಗಪಟುಗಳ ಜತೆ ಮೋದಿ
ದೇಶದಲ್ಲಿ ಯೋಗಿಗಳು, ಋಷಿ ಮುನಿಗಳು ಯೋಗವನ್ನು ಹೆಚ್ಚಾಗಿ ಅಳವಡಿಸಿಕೊಂಡು 125ಕ್ಕೂ ಹೆಚ್ಚು ವರ್ಷಗಳು ಬದುಕಿದ್ದಾರೆ ಅದಕ್ಕೆ ಯೋಗವೇ ಕಾರಣ. ಹಾಗಾಗಿ ನಾವೆಲ್ಲರೂ ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿ ಶಕ್ತಿ ತುಂಬಬೇಕಿದೆ ಎಂದರು.
ಯೋಗ ಪ್ರಾಚೀನ ಕಲೆ:
ದೇಹದಲ್ಲಿ ಖಾಯಿಲೆ ನಿವಾರಣೆ ಜೊತೆಗೆ ನಮ್ಮ ಇಂದ್ರಿಯಗಳು ಬಹಳ ಚೆನ್ನಾಗಿ ಕೆಲಸ ಮಾಡಬೇಕಾದರೆ ನಿರಂತವಾಗಿ ಯೋಗಾಭ್ಯಾಸ ಮಾಡಬೇಕು. ಶಾಲೆ ಮತ್ತು ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಪ್ರತಿದಿನ ಅರ್ಧಗಂಟೆಗಳ ಯೋಗಾಭ್ಯಾಸ ಮಾಡಿಸಿದರೆ ಅವರಿಗೆ ಏಕಾಗ್ರತೆ, ಶ್ರದ್ಧೆ ನೆನೆಪಿನ ಶಕ್ತಿ ಹೆಚ್ಚಾಗುತ್ತದೆ. ಯೋಗ ಎಂಬುದು ಪ್ರಾಚೀನವಾದ ಕಲೆ ಎಂದು ಜಿಲ್ಲಾಧಿಕಾರಿ ಎಸ್. ಅಶ್ವತಿ ತಿಳಿಸಿದರು.
ಉಪನಿಷತ್ತುಗಳು, ಋಗ್ವೇದ ದಲ್ಲಿಯೂ ಸಹ ಯೋಗಾಭ್ಯಾಸದ ಬಗ್ಗೆ ಪ್ರಸ್ತಾಪವಿದೆ. ನಮ್ಮ ದೇಶದ ಋಷಿ – ಮುನಿಗಳು ನಿರಂತರವಾಗಿ ಯೋಗಾಭ್ಯಾಸ ಮಾಡಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ ಎಂದರು.
ಇತ್ತೀಚಿನ ದಿನದಲ್ಲಿ ಯುವಕರು ದೈಹಿಕ ಸದೃಢತೆಗಾಗಿ ಅನೇಕ ಉಪಕರಣಗಳನ್ನು ಬಳಸುತ್ತಾರೆ. ಆದರೆ ಯೋಗಾಭ್ಯಾಸದಿಂದ ದೈಹಿಕ ಸದೃಢತೆ ಜೊತೆಗೆ ಮಾನಸಿಕವಾಗಿಯೂ ಸಹ ಶಾಂತಿಯಿಂದ ಇರಬಹುದಾಗಿದೆ ಎಂದರು.
ಇದನ್ನು ಓದಿ – BMRCLನ ನಮ್ಮ ಮೆಟ್ರೋಗೆ ದಶಮಾನೋತ್ಸವದ ಸಂಭ್ರಮ : 3 ನೇ ಹಂತದ ಯೋಜನೆ ಸಿದ್ದತೆ
ಮದ್ದೂರಿನ ಶಿವಪುರ ಸತ್ಯಾಗ್ರಹ ಸೌದ ಆವರಣ, ಕೆ ಆರ್.ಪೇಟೆಯ ಲಕ್ಷ್ಮಿಜನಾರ್ಧನಸ್ವಾಮಿ ದೇವಸ್ಥಾನ ಹಾಗೂ ಆದಿ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಈ ಭಾರಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಯೋಗ ದಿನಾಚರಣೆಯನ್ನು ಬಹಳ ಯಶಸ್ವಿಯಾಗಿ ಆಚರಿಸಲಾಯಿತು ಎಂದರು.
ಮನಸ್ಸಿನ ನಿಯಂತ್ರಣ ಯೋಗ-ಧ್ಯಾನದಿಂದ ಮಾತ್ರ ಸಾಧ್ಯ:
ಯೋಗ ಎಂಬುದು ಸಂಸ್ಕೃತದ ಯುಗ್ ಎಂಬ ಪದದಿಂದ ಬಂದಿದೆ. ಯೋಗ ಎಂದರೆ ಒಗ್ಗೂಡಿಸುವುದು ಎಂದರ್ಥ. ನಮ್ಮ ಶರೀರ,ಮನಸು,ಆತ್ಮವನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳುವುದೇ ನಾವು ಯೋಗದಿಂದ ತಿಳಿದುಕೊಳ್ಳುವ ವಿಷಯವಾಗಿದೆ.ಮನಸ್ಸನ್ನು ನಿಯಂತ್ರಣದಲ್ಲಿಡಲು ಯೋಗ ಮತ್ತು ಧ್ಯಾನದಿಂದ ಮಾತ್ರ ಸಾಧ್ಯ ಎಂದು ಜಿ.ಪಂ.ಸಿಇಒ ದಿವ್ಯಪ್ರಭು ತಿಳಿಸಿದರು.
ಮನುಷ್ಯರಿಗೆ ದೇಹ ಒಂದು ಕಡೆ ಮನಸ್ಸು ಮತ್ತೊಂದು ಕಡೆ ಇರುತ್ತದೆ ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತದೆ ಆಗಾಗಿ ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಡಲು ಯೋಗ ಮತ್ತು ಧ್ಯಾನ ದಿಂದ ಮಾತ್ರಸಾಧ್ಯ ಎಂದರು.
ಯೋಗ ಮತ್ತು ಧ್ಯಾನವನ್ನು ದಿನನಿತ್ಯ ಮಾಡೋಣ ಇದೊಂದು ಅಭ್ಯಾಸವಾಗಿ ಮಾಡಿಕೊಂಡು ನಮ್ಮ ಜೀವನವನ್ನು ಹಾಗೂ ಸಮಾಜವನ್ನು ಸದೃಢವಾಗಿ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ತಹಶೀಲ್ದಾರ್ ಗಳಾದ ಶ್ವೇತ ಎನ್.ರವೀಂದ್ರ, ನಯನ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ಯೋಗ ಶಿಕ್ಷಕರಾದ ಶಂಕರ ನಾರಾಯಣ ಶಾಸ್ತ್ರಿ, ಪುರಸಭೆ ಉಪಾಧ್ಯಕ್ಷರಾದ ಎಂ.ಕೃಷ್ಣ, ಉಪಅರಣ್ಯ ಸಂರಕ್ಷಣಾಧಿಕಾರಿ ಋತ್ರನ್, ಹಿರಿಯ ಮುಖಂಡರಾದ ಡಾ.ಸಿದ್ದರಾಮಯ್ಯ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
- ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
More Stories
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ