BMRCLನ ನಮ್ಮ ಮೆಟ್ರೋಗೆ ದಶಮಾನೋತ್ಸವದ ಸಂಭ್ರಮ : 3 ನೇ ಹಂತದ ಯೋಜನೆ ಸಿದ್ದತೆ

Team Newsnap
1 Min Read
Application Invitation for Recruitment of Various 236 Posts in Our Metro ನಮ್ಮ ಮೆಟ್ರೋದಲ್ಲಿ ವಿವಿಧ 236 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋಗೆ ಈಗ ದಶಕದ ಸಂಭ್ರಮ 2012ರಲ್ಲಿ ಹಳಿಗಿಳಿದ ಮೆಟ್ರೋ ರೈಲು, ಆನಂತರ ತನ್ನ ಕಬಂಧಬಾಹುವನ್ನು ವಿಸ್ತರಿಸ್ತಾನೆ ಇದೆ.

ಈಗಾಗಲೇ ಮೊದಲ ಹಂತದ ಯೋಜನೆ ಸಂಪೂರ್ಣವಾಗಿ ಮುಗಿದಿದೆ. 2ನೇ ಹಂತದ ಮೆಟ್ರೋ ಯೋಜನೆ ಕೂಡ ಮುಕ್ತಾಯದ ಹಂತಕ್ಕೆ ಬಂದಿದೆ. ಈ ನಡುವೆಯೇ ಬಿಎಂಆರ್​ಸಿಎಲ್​, ಮೆಟ್ರೋ 3ನೇ ಹಂತದ ಯೋಜನೆ ಕೈಗೆತ್ತಿಗೊಳ್ಳಲು ಸಿದ್ಧತೆ ನಡೆಸಿದೆ.

BENGALORE METRO

3ನೇ ಹಂತದ ನಕ್ಷೆ ಸಿದ್ಧವಾಗಿದೆ 43 ಕಿ.ಮೀ.ಉದ್ದದ ಮಾರ್ಗ ನಿರ್ಮಿಸುವ ಗುರಿ ಇದೆ. ಮೆಟ್ರೋ 3ನೇ ಹಂತದಲ್ಲಿ ಎರಡು ಕಾರಿಡಾರ್​ಗಳಲ್ಲಿ ಒಟ್ಟು 43 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಮಾನವೀಯತೆಗಾಗಿ ಯೋಗ: ಮೈಸೂರು ಆಧ್ಯಾತ್ಮಿಕ ಕೇಂದ್ರ ಪ್ರಧಾನಿ ಮೋದಿ ಬಣ್ಣನೆ

ಮೊದಲ ಕಾರಿಡಾರ್​ ಜೆ.ಪಿ.ನಗರದಿಂದ ಹೆಬ್ಬಾಳದವರೆಗೆ 32 ಕಿ.ಮೀ ಮಾರ್ಗವಿದೆ. ಒಟ್ಟು 22 ನಿಲ್ದಾಣಗಳು ಇರಲಿವೆ. ಹಾಗೇ ಎರಡನೇ ಕಾರಿಡಾರ್​ನಲ್ಲಿ ಹೊಸಹಳ್ಳಿ ಟೋಲ್​ನಿಂದ ಕಡಬಗೆರೆವರೆಗೆ 13 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. , 9 ನಿಲ್ದಾಣ ಬರಲಿವೆ.
ಉಪನಗರ ರೈಲು, ಬಸ್ ಡಿಪೋ ಒಟ್ಟು 9 ಸಾರಿಗೆ ತಾಣಗಳಿಗೆ ಮೆಟ್ರೋ 3ನೇ ಹಂತದ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಮುಂದಿನ ವರ್ಷ ಅಂದ್ರೆ 2024ರ ಮಧ್ಯದಲ್ಲಿ ಅಥವಾ 2025ಕ್ಕೆ 3ನೇ ಹಂತದ ಕಾಮಗಾರಿ ಶುರುವಾಗಲಿದ್ದು, 11 ಸಾವಿರದ 250 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ. ಮೈಸೂರಿನಲ್ಲಿ ನಮೋ ಯೋಗ: 15 ಸಾವಿರ ಯೋಗಪಟುಗಳ ಜತೆ ಮೋದಿ

metro nio

ಎಲ್ಲಾ ಅಂದುಕೊಂಡಂತೆ ಆದ್ರೆ 2028ಕ್ಕೆ ಮೆಟ್ರೋ 3ನೇ ಹಂತದ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಿದೆ ಬಿಎಂಆರ್​ಸಿಎಲ್​.

ನಮ್ಮ ಮೆಟ್ರೋ

Share This Article
Leave a comment