ನ್ಯಾಷನಲ್ ಹೆರಾಲ್ಡ್ ( National Herald )ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗುವುದಾಗಿ ಕೆಪಿಸಿಸಿ ( KPCC ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಇದನ್ನು ಓದಿ –ಸೀರಿಯಲ್ ನಟಿ ದಿವ್ಯಾ ಶ್ರೀಧರ್ ಗೆ ವಂಚನೆ ಪಾಪಿ ಪತಿಯ ಬಗ್ಗೆ ದೂರಿನ ವಿಡಿಯೋ
ಇಂದೇ ದೆಹಲಿಗೆ ಡಿಕೆ ಸಹೋದರರಾದ ಡಿ.ಕೆ.ಶಿವಕುಮಾರ್ ( D K Shivkumar ) ಹಾಗೂ ಸಂಸದ ಡಿ.ಕೆ.ಸುರೇಶ್ ( D K Suresh ) ತೆರಳಲಿದ್ದಾರೆ.
ಮಂಡ್ಯದಲ್ಲಿ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು. ನಂತರ ಖರಡ್ಯ ಗ್ರಾಮದಲ್ಲಿ ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಚಾರಣೆಗೆ ಹಾಜರಾಗಲು ನಾನು ಮತ್ತು ಡಿ.ಕೆ.ಸುರೇಶ್ ಸಮಯಾವಕಾಶ ಕೇಳಿದ್ದೆವು.
ಭಾರತ್ ಜೋಡೋ ಯಾತ್ರೆ ( Bharat Jodo Yatra ) ಮುಗಿದ ಮೇಲೆ ಬರುತ್ತೇವೆ ಎಂದು ಕಾಲಾವಕಾಶ ಕೊಡಿ ಅಂತಾ ಕೇಳಿದ್ದೆವು. ಇವತ್ತು ಇಡಿಯವರು ಮತ್ತೊಂದು ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ನಾವು ನಿಮಗೆ ಆದೇಶ ಕೊಡುತ್ತಿದ್ದೇವೆ. ಹೀಗಾಗಿ ನಾಳೆ 10:30ಕ್ಕೆ ಇಡಿ ( ED ) ವಿಚಾರಣೆಗೆ ಹಾಜರಾಗುವಂತೆ 2ನೇ ನೋಟಿಸ್ ಕೊಟ್ಟಿದ್ದಾರೆ. ಈ ಬಗ್ಗೆ ಪಕ್ಷದ ಹಿರಿಯರ ಜೊತೆ ಚರ್ಚಿಸಿದ್ದೇವೆ.
ನಾವು ನಮ್ಮ ಪಕ್ಷ ಕಾನೂನಿಗೆ ಗೌರವ ಕೊಡುವವರು. ಕಾನೂನಿಗೆ ಅಗೌರವ ತೋರುವುದು ಸರಿಯಲ್ಲ. ಹೀಗಾಗಿ ನೋಟಿಸ್‌ಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು