ನಾಳೆ ಇಡಿ ವಿಚಾರಣೆಗೆ ಹೋಗುತ್ತೇವೆ : ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡ್ತೀವಿ – ಡಿಕೆಶಿ

Team Newsnap
1 Min Read
PSI Scam: ED raids RD Patil's residence ಪಿಎಸ್‌ಐ ಹಗರಣ: ಆರ್‌ಡಿ ಪಾಟೀಲ್ ನಿವಾಸದ ಮೇಲೆ ಇಡಿ ದಾಳಿ

ನಾಳೆ ಇಡಿ ವಿಚಾರಣೆಗೆ ಹೋಗವುದಿಲ್ಲ ಎಂದು ಬೆಳಿಗ್ಗೆ ಹೇಳಿದ್ದ ಡಿಕೆ ಬ್ರದರ್ಸ್ ಈಗ ಉಲ್ಟಾ ಹೊಡೆದಿದ್ದಾರೆ.


ನ್ಯಾಷನಲ್‌ ಹೆರಾಲ್ಡ್‌ ( National Herald )ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗುವುದಾಗಿ ಕೆಪಿಸಿಸಿ ( KPCC ) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.ಇದನ್ನು ಓದಿ –ಸೀರಿಯಲ್ ನಟಿ ದಿವ್ಯಾ ಶ್ರೀಧರ್ ಗೆ ವಂಚನೆ ಪಾಪಿ ಪತಿಯ ಬಗ್ಗೆ ದೂರಿನ ವಿಡಿಯೋ

ಇಂದೇ ದೆಹಲಿಗೆ ಡಿಕೆ ಸಹೋದರರಾದ ಡಿ.ಕೆ.ಶಿವಕುಮಾರ್‌ ( D K Shivkumar ) ಹಾಗೂ ಸಂಸದ ಡಿ.ಕೆ.ಸುರೇಶ್‌ ( D K Suresh ) ತೆರಳಲಿದ್ದಾರೆ.

ಮಂಡ್ಯದಲ್ಲಿ ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್‌ ಪಾಲ್ಗೊಂಡಿದ್ದರು. ನಂತರ ಖರಡ್ಯ ಗ್ರಾಮದಲ್ಲಿ ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಚಾರಣೆಗೆ ಹಾಜರಾಗಲು ನಾನು ಮತ್ತು ಡಿ.ಕೆ.ಸುರೇಶ್ ಸಮಯಾವಕಾಶ ಕೇಳಿದ್ದೆವು.

ಭಾರತ್ ಜೋಡೋ ಯಾತ್ರೆ ( Bharat Jodo Yatra ) ಮುಗಿದ ಮೇಲೆ ಬರುತ್ತೇವೆ ಎಂದು ಕಾಲಾವಕಾಶ ಕೊಡಿ ಅಂತಾ ಕೇಳಿದ್ದೆವು. ಇವತ್ತು ಇಡಿಯವರು ಮತ್ತೊಂದು ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ನಾವು ನಿಮಗೆ ಆದೇಶ ಕೊಡುತ್ತಿದ್ದೇವೆ. ಹೀಗಾಗಿ ನಾಳೆ 10:30ಕ್ಕೆ ಇಡಿ ( ED ) ವಿಚಾರಣೆಗೆ ಹಾಜರಾಗುವಂತೆ 2ನೇ ನೋಟಿಸ್ ಕೊಟ್ಟಿದ್ದಾರೆ. ಈ ಬಗ್ಗೆ ಪಕ್ಷದ ಹಿರಿಯರ ಜೊತೆ ಚರ್ಚಿಸಿದ್ದೇವೆ.

ನಾವು ನಮ್ಮ ಪಕ್ಷ ಕಾನೂನಿಗೆ ಗೌರವ ಕೊಡುವವರು. ಕಾನೂನಿಗೆ ಅಗೌರವ ತೋರುವುದು ಸರಿಯಲ್ಲ. ಹೀಗಾಗಿ ನೋಟಿಸ್‌ಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

Share This Article
Leave a comment