December 27, 2024

Newsnap Kannada

The World at your finger tips!

muruga , news , corporator

Give the seat of Muruga presiding officer to Shudras: kantraj ಮುರುಘಾ ಪೀಠಾಧಿಪತಿ ಸ್ಥಾನ ಶೂದ್ರರಿಗೆ ಬಿಟ್ಟು ಕೊಡಿ: ನಗರಸಭೆ ಮಾಜಿ ಅಧ್ಯಕ್ಷ ಕಾಂತರಾಜ್

ಮುರುಘಾ ಪೀಠಾಧಿಪತಿ ಸ್ಥಾನ ಶೂದ್ರರಿಗೆ ಬಿಟ್ಟು ಕೊಡಿ: ನಗರಸಭೆ ಮಾಜಿ ಅಧ್ಯಕ್ಷ ಕಾಂತರಾಜ್

Spread the love

ಪೋಕ್ಸೋ ಪ್ರಕರಣದಿಂದ ಜೈಲು ಪಾಲಾಗಿರುವ ಮುರುಘಾ ಸ್ವಾಮೀಜಿ ಸ್ಥಾನಕ್ಕೆ ನೂತನ ಪೀಠಾಧಿಪತಿ ನೇಮಿಸುವಂತೆ ಮಠದ ವಿರೋಧಿ ಬಣ ಸಭೆ ನಡೆಸಿದೆ.

ಇದರ ಬೆನ್ನಲ್ಲೇ ಶೂನ್ಯ ಪೀಠ ಪರಂಪರೆಯ ಮುರುಘಾ ಮಠಕ್ಕೆ ಶೂದ್ರರನ್ನು ಪೀಠಾಧಿಪತಿಯಾಗಿ ನೇಮಿಸುವಂತೆ ಚಿತ್ರದುರ್ಗ ನಗರಸಭೆಯ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಹೊಸ ಬಾಂಬ್ ಹಾಕಿದರು.ಇದನ್ನು ಓದಿ –ಭಾರತ್ ಜೋಡೋ ಯಾತ್ರೆ; ಸಂತ್ರಸ್ತರ ಜೊತೆಗೆ ಕಣ್ಣೀರಿಟ್ಟ ಡಿಕೆ ಶಿವಕುಮಾರ್ !

ಮುರುಘಾ ಶ್ರೀ ಬದಲಾವಣೆಗೆ ಸಭೆ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಶೂನ್ಯಪೀಠದ ಪರಂಪರೆಯ ಮಠದಲ್ಲಿ ಸರ್ವಧರ್ಮ, ಜಾತಿಗಳಿಗೂ ಸಮಾನ ಹಕ್ಕು ನೀಡಿರುವ ಪೀಠ ಇದಾಗಿದೆ. ಕೇವಲ ಒಂದು ಸಮುದಾಯಕ್ಕೆ ಮಠ ಸೀಮಿತವಾಗಿಲ್ಲ.

ಮುರುಘಾಶ್ರೀ ಬದಲಾವಣೆಗೆ ಕೇವಲ ಒಂದು ಕೋಮಿನವರಿಗೆ ಅಧಿಕಾರ ಕೊಟ್ಟವರು ಯಾರು? ಇದು ಬಸವತತ್ವದಡಿ ಬೆಳೆದು ನಿಂತಿರುವ ಪೀಠವಾಗಿದೆ ಎಂದರು.

ಶೂದ್ರರಾದ ಅಲ್ಲಮಪ್ರಭು ಈ ಪೀಠದ ಮೂಲ ಪೀಠಾಧ್ಯಕ್ಷರಾಗಿದ್ದರು. ಆದರೆ ಮುರುಘಾ ಸ್ವಾಮೀಜಿ ವಿರುದ್ಧ ಕೇಳಿಬಂದಿರುವ ಪೋಕ್ಸೋ ಆರೋಪದ ಬೆನ್ನಲ್ಲೇ ಶೂನ್ಯಪೀಠವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ ಸಭೆ ನಡೆಸಿದ್ದು ಸರಿಯಲ್ಲ. ಈ ಮುರುಘಾ ಮಠ ವೀರಶೈವ ಲಿಂಗಾಯತರ ಆಸ್ತಿಯಲ್ಲ.

ಶೂದ್ರರನ್ನು ಮಠದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಮುರುಘಾ ಮಠಕ್ಕೆ ದಕ್ಕೆಯಾಗಲು ಚಿತ್ರದುರ್ಗದ ಜನತೆ ಬಿಡಲ್ಲ. ಮುರುಘಾಶ್ರೀ ಕಲ್ಯಾಣ ಸಮಿತಿ ಕಟ್ಟಿಕೊಂಡು ಮುರುಘಾ ಪರಂಪರೆ ಉಳಿಸಲು ಮುಂದಾಗುತ್ತೇವೆಂದು ಸಭೆ ನಡೆಸಿದ ವೀರಶೈವ ಲಿಂಗಾಯತ ಮುಖಂಡರಿಗೆ ಟಾಂಗ್ ನೀಡಿದರು.

Copyright © All rights reserved Newsnap | Newsever by AF themes.
error: Content is protected !!