March 31, 2023

Newsnap Kannada

The World at your finger tips!

congress , politics , india

Bharat Jodo Yatra; DK Shivakumar cried with the victims! ಭಾರತ್ ಜೋಡೋ ಯಾತ್ರೆ; ಸಂತ್ರಸ್ತರ ಜೊತೆಗೆ ಕಣ್ಣೀರಿಟ್ಟ ಡಿಕೆ ಶಿವಕುಮಾರ್ !

ಭಾರತ್ ಜೋಡೋ ಯಾತ್ರೆ; ಸಂತ್ರಸ್ತರ ಜೊತೆಗೆ ಕಣ್ಣೀರಿಟ್ಟ ಡಿಕೆ ಶಿವಕುಮಾರ್ !

Spread the love

ಭಾರತ್ ಜೋಡೋ ಯಾತ್ರೆಯ ನಡುವೆ ರಾಹುಲ್ ಗಾಂಧಿ ಚಾಮರಾಜನಗರದ ಗುಂಡ್ಲುಪೇಟೆ ಹೊರವಲಯದ ವೀರನಪುರ ಕ್ರಾಸಿನಲ್ಲಿ ಸೋಲಿಗರು ಮತ್ತು ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದ ಸಂತ್ರಸ್ತರ ಜೊತೆಗೆ ಸಂವಾದ ನಡೆಸಿದರು .

ರಾಹುಲ್ ಗಾಂಧಿ ಜೊತೆಗಿನ ಸಂವಾದದ ವೇಳೆ ಕುಟುಂಬದ ಸದಸ್ಯರು ಕಣ್ಣೀರಿಟ್ಟರು.ಇದನ್ನು ಓದಿ –ಬದುಕಿಗೊಂದು ದೀವಿಗೆ…. ಭಗವದ್ಗೀತೆ


ಸಂವಾದದಲ್ಲಿ ಆಮ್ಲಜನಕ ದುರಂತದಲ್ಲಿ ತಂದೆಯನ್ನು ಕಳೆದುಕೊಂಡ ಸಂತ್ರಸ್ತರು ಮಗುವೊಂದು ಅಳುತ್ತಾ ಮಾತನಾಡಿ, ನಮ್ಮ ಅಪ್ಪ ಇದ್ದಾಗ ನಾನು ಏನೇ ಕೇಳಿದರೂ ತಂದು ಕೊಡುತ್ತಿದ್ರು. ನಮ್ಮ ಅಪ್ಪ ತೀರಿ ಹೋದ್ರು. ನಮ್ಮ ಅಮ್ಮಗೆ ಏನು ತೆಗೆದುಕೊಡುವುದಕ್ಕೆ ಆಗ್ತಿಲ್ಲ.

ಅಪ್ಪನನ್ನು ಡಾಕ್ಟರ್ ಗಳೆ ಸಾಯಿಸಿದ್ದು, ಆದ್ರೆ ನಾನು ಡಾಕ್ಟರ್ ಓದಿ ಜನಗಳ ಸೇವೆ ಮಾಡ್ತೀನಿ ಅಂತಾ ರಾಹುಲ್​ ಗಾಂಧಿ ಮುಂದೆ ಅಳಲು ತೋಡಿಕೊಂಡಳು.

ಸರ್ಕಾರ ಸಹಾಯ ಮಾಡಬಹುದಿತ್ತು. ನಾವು ಪಕ್ಷವಾಗಿ ಸಹಾಯ ಮಾಡಬೇಕು. ಮುಂದೆ ಸರ್ಕಾರ ಬರುತ್ತದೆ ಪರಿಹಾರ ಕೊಡಲು ಯತ್ನಿಸುತ್ತೇವೆ.

ರಾಹುಲ್ ಗಾಂಧಿ ಮಾತುಗಳನ್ನು ಕನ್ನಡಕ್ಕೆ ಭಾಷಾಂತರಿಸುವ ವೇಳೆ ಸ್ವತಃ ಡಿಕೆ ಶಿವಕುಮಾರ್ ಮಗುವಿನ ಅಳು ನೋಡಿ ಕಣ್ಣೀರಿಟ್ಟರು.

error: Content is protected !!