March 31, 2023

Newsnap Kannada

The World at your finger tips!

big boss , women , harassment

Black mail from Bigg Boss Manju Pavagada's brother to woman ಬಿಗ್ ಬಾಸ್ ಮಂಜು ಪಾವಗಡ ಸಹೋದರನಿಂದ ಯುವತಿಗೆ ಬ್ಲಾಕ್ ಮೇಲ್- ಜನರಿಂದ ಧರ್ಮದೇಟು

ಬಿಗ್ ಬಾಸ್ ಮಂಜು ಪಾವಗಡ ಸಹೋದರನಿಂದ ಯುವತಿಗೆ ಬ್ಲಾಕ್ ಮೇಲ್- ಜನರಿಂದ ಧರ್ಮದೇಟು

Spread the love

ತುಮಕೂರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಬ್ಲಾಕ್ ಮೇಲ್ ಮಾಡಿದ್ದ ಆರೋಪದ ಮೇರೆಗೆ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರ ಪ್ರದೀಪ್‍ ಹಾಗೂ ನಕಲಿ ಪತ್ರಕರ್ತರಿಗೆ ಧರ್ಮದೇಟು ಹಾಕಿದ ಘಟನೆ ಜರುಗಿದೆ.

ಪ್ರದೀಪ್ ವಾರಪತ್ರಿಕೆಯೊಂದರ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾನೆ. ಈತ ಸಬ್ಸಿಡಿ ಸಾಲ ಮಂಜೂರು ಮಾಡಿಕೊಡುವಂತೆ ನಗರ ಜೀವನೋಪಾಯ ಕೇಂದ್ರಕ್ಕೆ ಹೋಗಿದ್ದ.ಇದನ್ನು ಓದಿ –ಮುರುಘಾ ಪೀಠಾಧಿಪತಿ ಸ್ಥಾನ ಶೂದ್ರರಿಗೆ ಬಿಟ್ಟು ಕೊಡಿ: ನಗರಸಭೆ ಮಾಜಿ ಅಧ್ಯಕ್ಷ ಕಾಂತರಾಜ್

ಈ ವೇಳೆ ಲಂಚ ಆಮಿಷ ತೋರಿಸಿ ವೀಡಿಯೋ ಮಾಡಿಕೊಂಡಿದ್ದ. ಬಳಿಕ ಈ ವೀಡಿಯೋ ತೋರಿಸಿ ನಗರ ಜೀವನೋಪಾಯ ಕೇಂದ್ರದಲ್ಲಿ ಸಿಆರ್‌ಸಿ ಆಗಿ ಕೆಲಸ ಮಾಡುತ್ತಿರುವ ಯುವತಿಯೊಬ್ಬಳಿಗೆ ನಿರಂತರ ಬ್ಲಾಕ್ ಮೇಲ್ ಮಾಡುತ್ತಿದ್ದ.

ನಿನ್ನೆ ಸಂಜೆ ಆ ಯುವತಿ ಕೆಲಸ ಮಾಡುವ ಜಾಗಕ್ಕೆ ಬಂದು ಬೆದರಿಕೆ ಹಾಕುತ್ತಿದ್ದಾಗ ಅಲ್ಲಿದ್ದವರು ಧರ್ಮದೇಟು ಹಾಕಿದ್ದಾರೆ.

ಅಷ್ಟೇ ಅಲ್ಲದೇ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರದೀಪ್‍ನ ಜೊತೆ ಬಂದಿದ್ದ ನಕಲಿ ಪತ್ರಕರ್ತರು ಸೇರಿ ಹ್ಯೂಮನ್ ರೈಟ್ಸ್ ಎಂದು ಹೇಳಿಕೊಂಡು ಬಂದವರಿಗೂ ಗೂಸಾ ಬಿದ್ದಿದೆ.

ಈ ಘಟನೆಗೆ ಸಂಬಂಧಿಸಿ ಬ್ಲಾಕ್ ಮೇಲ್‍ಗೆ ಮುಂದಾಗಿದ್ದ ನಾಲ್ವರು ತುಮಕೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತುಮಕೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

error: Content is protected !!