ಕಾಂಗ್ರೆಸ್​ ಗೆ ಗುಡ್​ಬೈ ಹೇಳಿದ ಗುಲಾಮ್ ನಬಿ ಆಜಾದ್

Team Newsnap
1 Min Read

ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​ ನ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಪ್ರಾಥಮಿಕ ಸದಸ್ಯತ್ವ ಸೇರಿ ಪಕ್ಷದ ಎಲ್ಲಾ ಸ್ಥಾನ-ಮಾನಗಳಿಗೂ ರಾಜೀನಾಮೆ ನೀಡಿದ್ದಾರೆ.

ಚುನಾವಣಾ ಪ್ರಚಾರ ಸಮಿತಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಗುಲಾಮ್ ನಬಿ ಆಜಾದ್ ಇದೀಗ ಪಕ್ಷವನ್ನೇ ತೊರೆದಿದ್ದಾರೆ. G-23 ನಾಯಕರಲ್ಲಿ ಗುರುತಿಸಿಕೊಂಡಿದ್ದ ಆಜಾದ್ ಅವರನ್ನು ಕಾಂಗ್ರೆಸ್​ ಸಂಪೂರ್ಣ ಕಡೆಗಣಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನು ಓದಿ ಸೆಪ್ಟೆಂಬರ್ 7 ರಂದು NEET UG ಫಲಿತಾಂಶ ಪ್ರಕಟ

ರಾಹುಲ್ ವಿರುದ್ಧ ಅಸಮಾಧಾನ  ಆಜಾದ್, ಕಾಂಗ್ರೆಸ್​ ಅಧ್ಯಕ್ಷರಿಗೆ ನಾಲ್ಕು ಪುಟಗಳ ರಾಜಿನಾಮೆ ಪತ್ರವನ್ನ ನೀಡಿದ್ದಾರೆ. ಆ ಪತ್ರದಲ್ಲಿ ರಾಜೀನಾಮೆಗೆ ಕಾರಣವನ್ನ ತಿಳಿಸಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆಜಾದ್, ರಾಹುಲ್ ಗಾಂಧಿ ಚೈಲ್ಡೀಸ್ ವರ್ತನೆಯಿಂದ ಪಕ್ಷ ಅಧೋಗತಿಗೆ ಬಂದಿದೆ.

ಪಕ್ಷದಲ್ಲಿ ಹಿರಿಯ ನಾಯಕರನ್ನ ಮೂಲೆಗುಂಪು ಮಾಡಲಾಯಿತು. ಕಪಿಲ್ ಸಿಬಲ್ ಮನೆಮೇಲೆ ಕಾಂಗ್ರೆಸ್ ಕಾರ್ಯಕರ್ತರೇ ದಾಳಿ ಮಾಡಿದರು. ಭಾರತ್ ಜೋಡೋ ಯಾತ್ರೆ ಮಾಡವ ಬದಲು ಕಾಂಗ್ರೆಸ್ ಜೋಡೋ ಯಾತ್ರೆ ಮಾಡಬೇಕಾಗಿದೆ. AICC ಯಲ್ಲಿ ಆಂತರಿಕ ಚುನಾವಣಾ ಪ್ರಕ್ರಿಯೆ ಇಲ್ಲ. ಎಲ್ಲವೂ ಕಾನೂನು ಬಾಹಿರವಾಗಿ ನಡೆಯುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Share This Article
Leave a comment