ರಾಮನಗರದ ಕಾಂಗ್ರೆಸ್ ಕಾರ್ಯಕರ್ತನ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಹಣ ಮತ್ತು ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಆನೇಕಲ್ ರಸ್ತೆಯ ಕಾಡುಜಕ್ಕಸಂದ್ರದಲ್ಲಿ ನಡೆದಿದೆ.
ನಾಗರಾಜು (43) ಎಂಬುವವರೇ ತೀವ್ರವಾಗಿ ಗಾಯಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತ. ತೀವ್ರವಾಗಿ ಗಾಯಗೊಂಡ ನಾಗರಾಜು ಕನಕಪುರ ತಾಲೂಕಿನ ಶೆಟ್ಟಿಕೆರೆದೊಡ್ಡಿ ಗ್ರಾಮದ ನಿವಾಸಿ.ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿಗೆ ಯುವತಿಯಿಂದ ಹನಿಟ್ರ್ಯಾಪ್ ಯತ್ನ
1 ಲಕ್ಷದ 99 ಸಾವಿರ ರೂಪಾಯಿ ಹಣ ಹಾಗೂ 10 ಗ್ರಾಂ ಚಿನ್ನದ ಉಂಗುರವನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಆನೇಕಲ್ ರಸ್ತೆಯ ಕಾಡುಜಕ್ಕಸಂದ್ರದ ಪಕ್ಕದಲ್ಲಿ ಆರೋಪಿಗಳ ಪೈಕಿ ಒಬ್ಬನಾದ ಶ್ರೀನಿವಾಸ್ ಎಂಬಾತನಿಗೆ ಸೇರಿದ ತೋಟದ ಮನೆಯಲ್ಲಿ ಈ ಕೃತ್ಯ ನಡೆದಿದೆ. ನಾಗರಾಜು ಅವರ ಕೈಕಾಲು ಕಟ್ಟಿ ಹಾಕಿ, ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
- ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
- ದಲಿತ ವಿಕಲಚೇತನ ಸೈಟ್ ನಲ್ಲಿ ಸಿದ್ದರಾಮಯ್ಯ ಮನೆ ನಿರ್ಮಾಣ – HDK
- ಪ್ರಜ್ವಲ್ ರೇವಣ್ಣನಿಂದ ಜಿ.ಪಂ ಮಾಜಿ ಸದಸ್ಯೆಗೆ 3 ವರ್ಷ ಲೈಂಗಿಕ ದೌರ್ಜನ್ಯ
- ಪ್ರೇಮಿಗಳು ಒಂದೇ ಹಗ್ಗಕ್ಕೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣು
- ಕೊಲೆಸ್ಟ್ರಾಲ್ ಮಟ್ಟ ಹಾಕಲು ಅಗಸೆ ರಾಮಬಾಣ ( ಅರೋಗ್ಯವೇ ಭಾಗ್ಯ )
- ನಂದಿನಿ ಹಾಲಿನ ದರ ಹೆಚ್ಚಳ – ಸಿಎಂ ಸಿದ್ದರಾಮಯ್ಯ