ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿಗೆ ಯುವತಿಯಿಂದ ಹನಿಟ್ರ್ಯಾಪ್ ಯತ್ನ!

Team Newsnap
1 Min Read
Chitradurga MLA Tippareddy Honeytrap attempt by a young woman! ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿಗೆ ಯುವತಿಯಿಂದ ಹನಿಟ್ರ್ಯಾಪ್ ಯತ್ನ!

ರಾಜ್ಯದ ಮತೊಬ್ಬ ರಾಜಕಾರಣಿಗೆ ಹನಿಟ್ರ್ಯಾಪ್ ಯತ್ನಿಸಲಾಗಿದೆ. ಚಿತ್ರದುರ್ಗ ಶಾಸಕರನ್ನು ಹನಿಟ್ರ್ಯಾಪ್‍ಗೆ ಯತ್ನ ಸಂಬಂಧ ಈಗಾಗಲೇ ಶಾಸಕರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್‍ಗೆ ಯತ್ನ ನಡೆದಿದೆ. ಮೊಬೈಲ್ ನಂಬರ್ ಒಂದರಿಂದ ವೀಡಿಯೋ ಕಾಲ್ ಮೂಲಕ ಶಾಸಕರನ್ನು ಸಿಲುಕಿಸುವ ಯತ್ನ ಮಾಡಲಾಗಿದೆ. ಬೆತ್ತಲೆಯಾಗಿದ್ದ ಯುವತಿಯೊಬ್ಬಳು ಶಾಸಕರಿಗೆ ವೀಡಿಯೋ ಕಾಲ್ ಮಾಡಿದ್ದಾಳೆ. ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ- ಹೈಕೋರ್ಟ್ ಅಂಗಳಕ್ಕೆ

ಶಾಸಕರು ಚಿತ್ರದುರ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಯಾವುದೋ ಹೆಂಗಸಿನ ಖಾಸಗಿ ಅಂಗಾಂಗ ತೋರಿಸಿದರು. ನಂತರ ವಾಟ್ಸಪ್‍ಗೆ ಅಶ್ಲೀಲ ವೀಡಿಯೋ ಕಳಿಸಿದ್ದಾರೆ. ವೀಡಿಯೋ ಕಳುಹಿಸಿದ ನಂಬರಿನ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಪ್ಪಾರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಚಿತ್ರದುರ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share This Article
Leave a comment