ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ- ಹೈಕೋರ್ಟ್ ಅಂಗಳಕ್ಕೆ

Team Newsnap
1 Min Read
Jamia Masjid: Illegal madrasa: Hindu Vigilance Forum deadline for eviction ಜಾಮಿಯಾ ಮಸೀದಿಯಲ್ಲಿ : ಅಕ್ರಮ ಮದರಸಾ : ತೆರವಿಗೆ ಹಿಂದೂ ಜಾಗರಣ ವೇದಿಕೆ ಗಡುವು

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಹೈಕೋರ್ಟ್ ಅಂಗಳದಲ್ಲಿದೆ ಮಂದಿರವೋ ಅಥವಾ ಮಸೀದಿಯೋ ಇತ್ಯರ್ಥಕ್ಕೆ ಕೊನೆಯ ಸಿದ್ಧತೆಗಳು ನಡೆದಿದೆ.

ಇನ್ನೆರಡು ದಿನಗಳಲ್ಲಿ ಹೈಕೋರ್ಟ್ ನಲ್ಲಿ 108 ಹನುಮ ಭಕ್ತರು ದಾವೆ ಹೂಡಲಿದ್ದಾರೆ.5 ತಿಂಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಜಾಮಿಯಾ ಮಸೀದಿಯಲ್ಲ ಹನುಮ ಮಂದಿರ ಎಂದು ಹೋರಾಟ ನಡೆಸಿತ್ತು.ಜೆಡಿಎಸ್ ಪಂಚರತ್ನಕ್ಕೆ ವರುಣ ಅಡ್ಡಿ : ಒಂದು ವಾರ ಬ್ರೇಕ್- ಮಳೆ ಬಿಡುವು ನೀಡಿದ ಮೇಲೆ ಯಾತ್ರೆಗೆ ಚಾಲನೆ

ಮಸೀದಿ ಜಾಗ ಹಿಂದೂಗಳಿಗೆ ಮರಳಿ ನೀಡುವಂತೆ ಸರ್ಕಾರಕ್ಕೆ ಗಡುವು ನೀಡಿದ್ದವು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಇದೀಗ ಕೋರ್ಟ್ ಮೊರೆ ಹೋಗಲಾಗಿದೆ. ಅಯೋಧ್ಯೆ ಶ್ರೀರಾಮ ಮಂದಿರ ರೀತಿ ಹನುಮ ಮಂದಿರಕ್ಕಾಗಿ ನ್ಯಾಯಾಂಗ ಹೋರಾಟ ನಡೆಸಲು ಕೊನೆಯ ಹಂತದ ತಯಾರಿಗಳು ಸಹ ಇದೀಗ ಮುಕ್ತಾಯಗೊಂಡಿವೆ.

ವಕೀಲ ರವಿಶಂಕರ್ ಮೂಲಕ ದಾವೆ ಹೂಡಲು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ದಾಖಲಾತಿಗಳನ್ನು ಭಜರಂಗ ಸೇನೆ ಸಿದ್ಧಪಡಿಸಿಕೊಂಡಿದೆ. ದಾಖಲೆ ಸಮೇತ ಕೋರ್ಟ್ ಮೆಟ್ಟಿಲೇರಲು ಭಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಸಿದ್ಧತೆ ಮಾಡಿಕೊಂಡಿದ್ದಾರೆ. ಹಿಂದೂಗಳ ಮಂಗಳಕರ ಸಂಖ್ಯೆ ಎಂಬ ಕಾರಣಕ್ಕೆ 108 ಪಿಐಎಲ್ ಸಲ್ಲಿಕೆ ಮಾಡಲಾಗುತ್ತಿದೆ. ಇದರಲ್ಲಿ ಹನುಮಂತನನ್ನೇ ಪ್ರತಿವಾದಿ ಮಾಡಿ ಮಂದಿರಕ್ಕಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ.

ಮೈಸೂರು ಗೆಜೆಟಿಯರ್, ಮಸೀದಿಯಲ್ಲಿನ ಹಿಂದೂ ವಾಸ್ತುಶಿಲ್ಪ, ಮೂರ್ತಿ ಕೆತ್ತನೆ, ಕಂಬಗಳ ಮೇಲಿನ ದೇವರ ಚಿತ್ರಕಲೆ, ಕಲ್ಯಾಣಿ ಸೇರಿದಂತೆ ಕೆಲ ಬ್ರಿಟಿಷ್ ಅಧಿಕಾರಿಗಳು ಉಲ್ಲೇಖಿಸಿರುವ ದಾಖಲೆಗಳ ಸಂಗ್ರಹ ಮಾಡಲಾಗಿದೆ. ಎರಡನ್ಮೂರು ದಿನಗಳಲ್ಲಿ ದಾಖಲೆ ಹಾಗೂ ಸಾಕ್ಷಿಗಳ ಸಮೇತ ಹೈಕೋರ್ಟ್ ದಾವೆ ಹೂಡಲು 108 ಹನುಮ ಭಕ್ತರು ಸಿದ್ಧರಾಗಿದ್ದು, ಹನುಮ ಮಂದಿರ ಕೆಡವಿ ಟಿಪ್ಪು ಮಸೀದಿ ಕಟ್ಟಿರುವುದಾಗಿ ಆರೋಪಿಸಿ ಈ ನ್ಯಾಯಾಂಗ ಹೋರಾಟ ನಡೆಯಲಿದೆ ಎಂದು ಭಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

Share This Article
Leave a comment