ಬ್ಲ್ಯಾಕ್​ಮೇಲ್​ ನಿಂದ ಲೂಟಿಗಿಳಿದ ಖತರ್ನಾಕ್ ಗ್ಯಾಂಗ್ ಪೋಲಿಸ್ ಬಲೆಗೆ

Team Newsnap
2 Min Read
Gang looted by blackmail in police trap ಬ್ಲ್ಯಾಕ್​ಮೇಲ್​ ನಿಂದ ಲೂಟಿಗಿಳಿದ ಖತರ್ನಾಕ್ ಗ್ಯಾಂಗ್ ಪೋಲಿಸ್ ಬಲೆಗೆ

ಐಎಎಸ್ ಅಧಿಕಾರಿಯ ಪಿಎ ಎಂದು ಪರಿಚಯ ಮಾಡಿಕೊಂಡು ಮಹಿಳೆಯೊಬ್ಬರು ಉದ್ಯಮಿಗೆ 4‌ ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿ ಬ್ಲ್ಯಾಕ್​ ಮೇಲ್​ ಮಾಡಿದ ಆರೋಪ  ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಜರುಗಿದೆ

ಪ್ರಕರಣದಲ್ಲಿ ಪುಷ್ಪಾ ಅಲಿಯಾಸ್ ಪುಷ್ಪಲತಾ, ಅಯ್ಯಪ್ಪ ಅಲಿಯಾಸ್ ಅರ್ಜುನ್, ರಾಕೇಶ್ ಹಾಗೂ ಸಂತೋಷ್ ಎಂಬುವವರ ವಿರುದ್ಧ ಈ ಆರೋಪ ಕೇಳಿಬಂದಿದೆ.

ಪೊಲೀಸರು ಪುಷ್ಪಾ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನು ಓದಿ –ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಆಕಾಶ್ ಎಸ್ ತಗಡೂರು

ನಗರದ ರವಿ ಇಂಡಸ್ಟ್ರೀಯಲ್ ಸಪ್ಲೈ ಮಾಲೀಕನ ಮಗನಾದ ಸೂರಜ್ ಅವರಿಗೆ ಎರಡು ವರ್ಷದ ಹಿಂದೆ ಪರಿಚಯವಾಗಿದ್ದ ಪುಷ್ಪಲತಾ, ಮೂರು ತಿಂಗಳ ಹಿಂದೆ ಸರ್ಕಾರದ ಟೆಂಡರ್ ಕೊಡಿಸ್ತೀನಿ ಎಂದು ನಾಲ್ಕೈದು ಬಾರಿ ಭೇಟಿಯಾಗಿದ್ದರಂತೆ.

ಸಂತೋಷ್ ಎಂಬುವವರನ್ನು ಭೇಟಿ ಮಾಡಿಸಿದ ಪುಷ್ಪಾ, ಇವರು ಐಎಎಸ್ ಅಧಿಕಾರಿಯ ಪಿಎ, ಟೆಂಡರ್ ಕೊಡಿಸ್ತಾರೆ ಅಂತ ಹೇಳಿದ್ದರಂತೆ. ಈ ಹೊತ್ತಿಗೆ ಮಾತನಾಡುತ್ತಿದ್ದ ವೇಳೆ ಏಕಾಏಕಿ ರೂಮಿಗೆ ನುಗ್ಗಿದ್ದ ಇಬ್ಬರು ಆರೋಪಿಗಳು, ಸೂರಜ್​ ಮೇಲೆ ಹಲ್ಲೆ ಮಾಡಿ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದರು ಎನ್ನಲಾಗಿದೆ.

ಪುಷ್ಪಾ ಕೂಡ ಅವರೊಂದಿಗೆ ಸೇರಿ ಹಲ್ಲೆ ಮಾಡಿ, ನಾಲ್ಕು ಕೋಟಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಳಂತೆ. ಇಲ್ಲ ಎಂದರೇ ರೇಪ್ ಮಾಡಿದ್ಯಾ ಅಂಥ ಕೇಸ್ ಹಾಕ್ತೀನಿ‌ ಎಂದು ಬೆದರಿಕೆ ಹಾಕಿದ್ದಳು.

ಉದ್ಯಮಿ ಸೂರಜ್, ನನ್ನ ಬಳಿ‌ ಅಷ್ಟು ದುಡ್ಡಿಲ್ಲ. ಮನೆ ಮಾರಿದರೂ ಅಷ್ಟು ದುಡ್ಡು ಸಿಗಲ್ಲ. ಬಿಟ್ಟು ಬಿಡಿ ಎಂದು ಬೇಡಿಕೊಂಡಿದ್ದರಂತೆ. ಆದರೂ ಬಿಡದೇ ಪಿಸ್ತೂಲ್​ ತೋರಿಸಿದ್ದ ಆರೋಪಿ ಅಯ್ಯಪ್ಪ, ಹಣ ನೀಡುವಂತೆ ಸೂರಜ್​ ಸ್ನೇಹಿತ ಗುರುಮೂರ್ತಿಗೆ 25 ಲಕ್ಷ ರುತರುವಂತೆ ಹೇಳಿದ್ದರಂತೆ.

ಈ ವೇಳೆ ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ಬಳಿ 25 ಲಕ್ಷ ಹಣ ತಂದಿದ್ದ ಗುರುಮೂರ್ತಿ, ಸೂರಜ್ ಇಲ್ಲದ ಕಾರಣ ಪುಷ್ಪಾಳ ಕಡೆಯವರಿಗೆ ಹಣ ನೀಡದೆ ವಾಪಾಸ್​ ಆಗಿದ್ದರಂತೆ.

ಪುಷ್ಪಲತಾ ಸೂರಜ್ ಬಳಿ ಬಂದು ನಿನ್ನ ಕಳಿಸ್ತಾ ಇದ್ದೀನಿ, ಈ ವಿಚಾರ ಹೊರಗೆ ಹೇಳಿದರೆ ರೇಪ್ ಕೇಸ್ ಹಾಕ್ತೀನಿ. ಜೊತೆಗೆ ಇಡೀ‌ ಕುಟುಂಬವನ್ನ ಹತ್ಯೆ ಮಾಡುತ್ತೆನೆಂದು ಪುಷ್ಪಾ ಬೆದರಿಕೆ ಹಾಕಿ ಕಳುಹಿಸಿದ್ದರಂತೆ.

ಘಟನೆ ಸಂಬಂಧ ಉದ್ಯಮಿ ಬ್ಯಾಟರಾಯನಪುರ ಪೊಲೀಸರು ದೂರು ನೀಡಿದ್ದು, ಪ್ರಕರಣ ವಿಚಾರಣೆ ನಡೆಸಿದ ಪೊಲೀಸರು ಪುಷ್ಪಾ ಸೇರಿ ಮೂವರು ಆರೋಪಿಗಳ ಬಂಧಿಸಿದ್ದಾರೆ. ಈಕೆ  ಶ್ರೀ ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆಯಾಗಿದ್ದಳು ಎನ್ನಲಾಗಿದೆ.

Share This Article
Leave a comment