ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶವಿಲ್ಲ – ಸುಪ್ರೀಂ

Team Newsnap
2 Min Read

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡುವಂತಿಲ್ಲ. ಯಥಾಸ್ಥಿತಿ ಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದೆ

ವಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂನ ತ್ರಿಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿದ ನಂತರ ಸುಪ್ರೀಂ ಕೋರ್ಟ್ ನ್ಯಾಯಪೀಠವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.ಇದನ್ನು ಓದಿ –ನಾಗಮಂಗಲ KSRTC ಬಸ್ ನಿಲ್ದಾಣ ಜಲಾವೃತ- 20ಕ್ಕೂ ಹೆಚ್ಚು ಬಸ್‍ಗಳು ಮುಳುಗಡೆ

ಇಂದು ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ನ್ಯಾಯಪೀಠದಲ್ಲಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ನೀಡಿದಂತೆ ಹೈಕೋರ್ಟ್ ಅನುಮತಿಯನ್ನು ಪ್ರಶ್ನಿಸಿದಂತ ಅರ್ಜಿಯ ವಿಚಾರಣೆ ನಡೆಸಲಾಯಿತು

ಈ ಬಳಿಕ ಮಧ್ಯಂತರ ಆದೇಶ ನೀಡೋದಕ್ಕೆ ನಿರಾಕರಿಸಿದ ನ್ಯಾಯಪೀಠವು, ಸಿಐಜೆ ನೇತೃತ್ವದ ಪೀಠಕ್ಕೆ ವರ್ಗಾವಣೆ ಮಾಡಿತ್ತು.

ಸುಪ್ರೀಂ ಕೋರ್ಟ್ ನ ಸಿಐಜೆ ನೇತೃತ್ವದ ನ್ಯಾಯಪೀಠಕ್ಕೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಅರ್ಜಿ ವರ್ಗಾವಣೆಗೊಂಡ ನಂತ್ರ, ಒಂದೇ ಗಂಟೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ತ್ರಿಸದಸ್ಯ ಪೀಠವನ್ನುರಚನೆ ಮಾಡಿದರು.

ನ್ಯಾಯಮೂರ್ತಿಗಳಾದಂತ ಇಂದಿರಾ ಬ್ಯಾನರ್ಜಿ, ಎಎಸ್ ಓಕಾ ಹಾಗೂ ಎಂ.ಎಂ ಸುಂದರೇಶ್ ಅವರ ತ್ರಿಸದಸ್ಯ ಪೀಠದ ಮುಂದೆ ಅರ್ಜಿಯ ವಿಚಾರಣೆ ಆರಂಭಗೊಂಡಿತು. ಸುಪ್ರೀಂ ಕೋರ್ಟ್ ನಂ.5ರಲ್ಲಿ ವಿಚಾರಣೆ ಆರಂಭಗೊಳ್ಳುತ್ತಿದ್ದಂತೇ, ವಕ್ಫ್
ಬೋರ್ಡ್ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದರು. ಈದ್ಗಾ ಮೈದಾನವು ವಕ್ಫ್ ಬೋರ್ಡ್ ಆಸ್ತಿ ಎಂಬುದಾಗಿ ವಾದಿಸಿದರು.

ಪ್ರತಿವಾದವನ್ನು ಸರ್ಕಾರದ ಪರವಾಗಿ ಮಂಡಿಸಿದ ಮುಕುಲ್ ರೋಹಟಗಿಯವರು 1987ರಿಂದಲೂ ಈದ್ಗಾ ಮೈದಾನವನ್ನು ಪಹಣಿಯಲ್ಲಿ ಸರ್ಕಾರಿ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ಕಂದಾಯ, ಬಿಬಿಎಂಪಿ ದಾಖಲೆಗಳಲ್ಲಿ ಆಟದ ಮೈದಾನವೆಂದು ಉಲ್ಲೇಖಿಸಲಾಗಿದೆ.

ಮೈದಾನ ಸರ್ಕಾರಿ ಭೂಮಿ ಎಂದು ಗುರುತಿಸಲಾಗಿದೆ. ಬಿಬಿಎಂಪಿ ಗಣೇಶೋತ್ಸವಕ್ಕೆ ಅವಕಾಶ ಕೊಟ್ಟಿಲ್ಲ. ರಾಜ್ಯ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಈದ್ಗಾ ಮೈದಾನ ಮುಚ್ಚಿಲ್ಲ. ಅಲ್ಲಿ ಪ್ರಾರ್ಥನೆಗೂ ಅವಕಾಶ ನೀಡಲಾಗುತ್ತಿದೆ ಎಂದು ವಾದ ಮಂಡಿಸಿದರು.ಬಾಬರಿ ಮಸೀದಿ ಧ್ವಂಸ ಪ್ರಕರಣಗಳು ರದ್ದು: ಸುಪ್ರಿಂಕೋರ್ಟ್ ತೀರ್ಪು

ಈ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಯಾರೂ ಮಾಲೀಕರು ಇಲ್ಲದಿದ್ದರೇ ರಾಜ್ಯ ಸರ್ಕಾರವೇ ಮಾಲೀಕ ಎಂದು ಅಭಿಪ್ರಾಯ ಪಟ್ಟಿತು. ಈದ್ಗಾ ಮತ್ತು ಸಮಾಧಿಯನ್ನು ಮಧ್ಯಂತರದಲ್ಲಿ ಬಳಸಲಾಗುತ್ತದೆ. ಬಿಬಿಎಂಪಿ ಪರವಾಗಿಯೂ ಮಾಲೀಕತ್ವ ಇಲ್ಲ.

ಮುಸ್ಲೀಂ ಪರವಾಗಿಯೂ ಮಾಲೀಕತ್ವ ಇಲ್ಲವೆಂದು ಅಭಿಪ್ರಾಯ ಪಟ್ಟು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತು. ಹೀಗಾಗೀ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಇಲ್ಲದಂತೆ ಆಗಿದೆ.

Share This Article
Leave a comment