ಖ್ಯಾತ ವಿಮರ್ಶಕ, ಚಿಂತಕ ಡಾ. ಜಿ.ಎಸ್. ಅಮೂರ ಎಂದೇ ಪ್ರಖ್ಯಾತರಾಗಿರುವ ಗುರುರಾಜ ಶ್ಯಾಮಾಚಾರ ಆಮೂರರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಬೆಳಗಿನ ಜಾವ 5 ಗಂಟೆಗೆ ನಿಧನರಾದರು.
ವಯೋಸಹಜ ಖಾಯಿಲೆಯಿಂದ ಬಳಲುತಿದ್ದ ಅಮೂರ ಬೆಂಗಳೂರಿನ ಮಗನ ಮನೆಯಲ್ಲಿ ಇದ್ದರು.
ಅಮೂರರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಅಮೂರರು ಕನ್ನಡದ ಖ್ಯಾತ ವಿಮರ್ಶಾಕಾರರು.
ಧಾರವಾಡ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಜನಿಸಿದ್ದ ಅಮೂರರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಹಾವೇರಿಯಲ್ಲಾಯ್ತು. ಮುಂಬೈನಲ್ಲಿ 1942 ರಲ್ಲಿ ಮೆಟ್ರಿಕ್ ಪೂರೈಸಿ ನಂತರ ಬಿಎ ಆನರ್ಸ್ ಪದವಿ ಹಾಗೂ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. ತರುವಾಯ ಗದಗಿನ ತೋಂಟದಾರ್ಯ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರಾದರು.
ಕೃತಿ ಪರೀಕ್ಷೆ, ದ.ರಾ. ಬೇಂದ್ರೆ, ಅ.ನ. ಕೃಷ್ಣರಾಯ, ಭುವನ ಭಾಗ್ಯ, ಕನ್ನಡ ಕಥನ ಸಾಹಿತ್ಯ, ಮುಂತಾದವು ಅವರಿಗೆ ಹೆಸರು ತಂದು ಕೊಟ್ಟ ವಿಮರ್ಶಾ ಕೃತಿಗಳು.
1996 ರಲ್ಲಿ ಇವರ ಭುವನ ಭಾಗ್ಯ ಕೃತಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ, 1999ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೋಲ್ಕತ್ತದವರು ಕೊಡಮಾಡುವ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ಜೊತೆ ಇನ್ನೂ ಅನೇಕ ಪ್ರಶಸ್ತಿಗಳು ಇವರ ಮುಡಿಗೇರಿವೆ
ಅಮೂರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಮುಂತಾದವರು ಸಂತಾಪ ಸೂಚಿಸಿದ್ದಾರೆ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ