ಮಂಡ್ಯ ದಲ್ಲಿ ಜಾಗೃತಿ ಹೆಚ್ಚು-ಕೊರೋನಾ ಸಾವು ಕಮ್ಮಿ: ಡಾ. ಶಿವಕುಮಾರ್

Team Newsnap
1 Min Read

ಪ್ರಸ್ತುತ ದಿನಗಳಲ್ಲಿ ವಿಶ್ವವನ್ನೇ ಕಾಡುತ್ತಿರುವ ಕೇೂವಿಡ್ 19ರ ನಿಯಂತ್ರಣದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮ ಮತ್ತು ಜಾಗೃತಿಕಾರ್ಯಕ್ರಮಗಳಿಂದಾಗಿ ಹೆಚ್ಚಿನ ಸಾವುನೇೂವುಗಳನ್ನು ತಡೆಗಟ್ಟಲು ಸಾದ್ಯವಾಯಿತು ಎಂದು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರು,ಡಾ:ಕೆ.ಎಂ.ಶಿವಕುಮಾರ್ ಅವರು ತಿಳಿಸಿದರು.

ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೇೂತ್ಸವ ಭವನದಲ್ಲಿ ಕೀಲಾರದ ಕ್ಷೀರಸಾಗರ ಮಿತ್ರಕೂಟ ಆಯೇೂಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಡಾ. ಶಿವಕುಮಾರ್ ನೆರೆ ಜಿಲ್ಲೆಗಳಿಗೆ ಹೇೂಲಿಸಿದರೆ ಮಂಡ್ಯದ ಜನರ ಸಹಕಾರ,ವೈದ್ಯರಸೇವೆ,ಸಾರ್ವಜನಿಕರ ನೆರವು ಅತ್ಯುತ್ತಮ ವಾಗಿತ್ತು ಎಂದು ತಿಳಿಸಿದರು.
ಮತ್ತೊಬ್ಬ ಅಭಿನಂದಿತರಾದ ಜನತಾ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ ನಮ್ಮ ತಾತನವರು ಕಟ್ಟಿದ ಸಂಸ್ಥೆಗೆ ನಾನು ಅಧ್ಯಕ್ಷನಾಗಿರುವುದು ನನ್ನ ಪುಣ್ಯ, ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು. ನನಗೆ ನೀಡಿರುವ ಎಲ್ಲಾ ಗೌರವಗಳಿಗಿಂತ ನನ್ನ ತವರೂರಿನ ಜನರು ನೀಡಿರುವ ಸನ್ಮಾನ ನನಗೆ ಹೆಚ್ಚು ಸಂತೇೂಷವನ್ನುಂಟುಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಶ್ರೀನಿವಾಸ್ ಮಾತನಾಡಿ ನನ್ನ ಎಲ್ಲಾ ಸಾಮಾಜಿಕ ಕೆಲಸಗಳಿಗೆ ನಿತ್ಯ ಸಚಿವ ಕೆ.ವಿ.ಶಂಕರಗೌಡರು ಸ್ಪೂರ್ಥಿ,ಅಂತಹ ಊರಿನ ಕ್ಷೀರಸಾಗರ ಮಿತ್ರಕೂಟ ಕಳೆದ 20ವರ್ಷಗಳಿಂದ ಉತ್ತಮ. ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಮುಂದೆ ಈ ಸಂಘಟನೆ ತನ್ನ ಕೆಲಸಗಳನ್ನು ಮುಂದುವರೆಸಲಿ ನನ್ನ ಸಹಕಾರವಿರುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಘದ ಸ್ಥಾಪಕ ಕಾರ್ಯದರ್ಶಿ ವೀರಪ್ಪ ಸರ್ಕಾರಿ ಕೆಲಸದಿಂದ ನಿವೃತ್ತರಾದ ಹಿನ್ನಲೆಯಲ್ಲಿ ಸನ್ಮಾನಿಸಲಾಯಿತು. ಮೈಸೂರು ವಿ.ವಿ.ಯ ನಿವೃತ್ತ ಪ್ರಸಾರಾಂಗ ನಿರ್ದೇಶಕ ಕೆ.ಟಿ.ವೀರಪ್ಪ ಅಭಿನಂದನಾ ಮಾತುಗಳನ್ನಾಡಿದರು ಮುಖ್ಯ ಅತಿಥಿಗಳಾಗಿ ಈ ಮಹದೇವ ವಕೀಲರಾದ ಕೆ.ಸಿ.ರಘು ಭಾಗವಹಿಸಿದ್ದರು.ವೇದಿಕೆಯಲ್ಲಿ ಸಂಘದ ಗೌರವಾದ್ಯಕ್ಷರಾದ ಕೆ.ಪಿ.ವೀರಪ್ಪ,ಪೇೂಷಕರಾದ ಡಿ.ಶಿವರಾಜು,ಹೆಚ್.ಸಿ.ಕಾಂತರಾಜು,
ಅಧ್ಯಕ್ಷ ಕೆ.ಜಯಶಂಕರ್,ಕಾರ್ಯದರ್ಶಿ ಕಾಳಮ್ಮನ ನಾಗೇಶ್. ಕೀಲಾರ ಕೃಷ್ಣೇಗೌಡ ಇತರರು ಉಪಸ್ಥಿತರಿದ್ದರು.

Share This Article
Leave a comment