ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಐದು ದಿನಗಳ‌ ಕಾಲ‌ ಸಂಪೂರ್ಣ ಲಾಕ್ ಡೌನ್ – ಡಿಸಿ ಅಶ್ವಥಿ ಪ್ರಕಟ

Team Newsnap
1 Min Read

ಕೊರೋನಾ ಸೋಂಕಿನ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಾಗದ ಹಿನ್ನೆಲೆಯಲ್ಲಿ ಮುಂದಿನ ವಾರವೂ ಕೂಡ ಜಿಲ್ಲೆಯಾದ್ಯಂತ ಮತ್ತೆ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾಧಿಕಾರಿಗಳು ನಿರ್ಧರಿಸಿದ್ದಾರೆ.

ಜೂನ್ 7, 8. 10, 12 ಹಾಗೂ 13 ರಂದು ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ.

ಲಾಕ್ ಡೌನ್ ವೇಳೆ ಹಾಲಿನ ಬೂತ್, ಮೆಡಿಕಲ್ ಶಾಪ್, ಎಟಿಎಂ ಹಾಗೂ ಪೆಟ್ರೋಲ್ ಬಂಕ್ ಗಳು ಮಾತ್ರ ಓಪನ್ ಆಗಿರುತ್ತವೆ

6, 9, ಮತ್ತು 11 ರಂದು ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳು, ತರಕಾರಿ ಹಣ್ಣಿನ ಅಂಗಡಿಗಳು ತೆರೆದಿರುತ್ತದೆ. ‌ಈ ದಿನಗಳಲ್ಲಿ ಬ್ಯಾಂಕ್ , ಎಲ್ ಐಸಿ ಸೇವಾ ಅವಧಿ ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ ನಿಗದಿ ಮಾಡಲಾಗಿದೆ ಎಂದು ಡಿಸಿ ಅಶ್ವಥಿ ಹೇಳಿದ್ದಾರೆ.

Share This Article
Leave a comment