June 5, 2023

Newsnap Kannada

The World at your finger tips!

exibition , fruit , flower

Fruit and flower show in Mandya from today till January 30 ಇಂದಿನಿಂದ ಜ.30 ರವರೆಗೆ ಮಂಡ್ಯದಲ್ಲಿ ಫಲಪುಷ್ಪ ಪ್ರದರ್ಶನ

ಇಂದಿನಿಂದ ಜ.30 ರವರೆಗೆ ಮಂಡ್ಯದಲ್ಲಿ ಫಲಪುಷ್ಪ ಪ್ರದರ್ಶನ

Spread the love

ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಜನವರಿ26 ರಿಂದ ಜನವರಿ 30 ರವರೆಗೆ 5 ದಿನಗಳ ಕಾಲ ಜಿಲ್ಲಾ ತೋಟಗಾರಿಕೆ ಇಲಾಖೆಯ ಕಛೇರಿಯ ಆವರಣದಲ್ಲಿ ಆಯೋಜಿಸಲಾಗಿದ್ದ ಫಲಪುಪ್ಪ ಪ್ರದರ್ಶನವನ್ನು ಕಂದಾಯ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಅವರು ಉದ್ಘಾಟಿಸಿದರು.

ಫಲ ಪುಷ್ಪಪ್ರದರ್ಶನದ ಆರ್ಕಣೆಗಳು :

ವೈವಿದ್ಯಮಯ ಅಲಂಕಾರಿಕ ಹೂಕುಂಡಗಳು ಮತ್ತು ಹೂವಿನ ಪಿರಮಿಡ್ ಗಳ ಜೋಡಣೆ. 25ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಪೆಟೊನಿಯಾ, ಅಂಟಿರೈನಂ, ಸಾಲ್ವಿಯಾ, ಸೆಲೋಶಿಯಾ, ಮಾರಿಗೋಲ್ಡ್, ಜೀನಿಯಾ, ಸೇವಂತಿಗೆ, ಗುಲಾಬಿ, ಪಾಯ್ನಿಸೆಟಿಯಾ ಮತ್ತು ಇತರೆ ವರ್ಣದ 20 ಸಾವಿರಕ್ಕೂ ಹೆಚ್ಚು ಅಲಂಕಾರಿಕ ಹೂ ಕುಂಡಗಳನ್ನು ವಿವಿಧ ವಿನ್ಯಾಸಗಳಲ್ಲಿ ಜೋಡಣೆ ಮಾಡಿ ಪ್ರದರ್ಶಿಸಲಾಗಿದೆ.ಚಿರತೆ ತಪ್ಪಿಸಿಕೊಳ್ಳಲು ಮರವೇರಿದ ಯುವತಿ- ಇಳಿಯುವಾಗ ಬಿದ್ದು ಗಂಭೀರ ಗಾಯ
ಜಿಲ್ಲೆಯ ನೋಂದಾಯಿತ ಬೋನ್ಸಾಯ್ ಕ್ಲಬ್‍ನ ಸದಸ್ಯರುಗಳು ಅಭಿವೃದ್ಧಿಪಡಿಸಿರುವ ವಿವಿಧ ಬಗೆಯ ಫೈಕಸ್ ಮತ್ತು ಇತರೆ ಹಣ್ಣಿನ ಜಾತಿಯ ಬೋನ್ಸಾಯ್ ಗಿಡಗಳ ಪ್ರದರ್ಶನ ನುರಿತ ತರಕಾರಿ ಕೆತ್ತನೆ ತಜ್ಞರಾದ ಹರೀಶ್ ಬ್ರಹ್ಮಾವರ್ ಮತ್ತು ತಂಡದವರಿಂದ ಕಲ್ಲಂಗಡಿ, ಕುಂಬಳ, ಕ್ಯಾರೇಟ್ ಮತ್ತು ಇತರೆ ತರಕಾರಿಗಳಲ್ಲಿ ವಿವಿಧ ಆಕೃತಿಗಳನ್ನು ಕೆತ್ತನೆ ಮಾಡಿ, ಆಲಂಕಾರಿಕವಾಗಿ ಜೋಡಣೆ ಮಾಡಲಾದ ಪ್ರದರ್ಶನ ಸಾರ್ವಜನಿಕರನ್ನು ಸೆಳೆಯುತ್ತಿದೆ.

ವಿವಿಧ ಮಾದರಿಯ ಅಲಂಕಾರಿಕ ಕುಂಡಗಳು ಹಾಗೂ ಗುಲಾಬಿ, ಸೇವಂತಿಗೆ, ಕಾರ್ನೇಶನ್, ಲಿಲ್ಲೀಸ್, ಬರ್ಡ್ ಆಫ್ ಪ್ಯಾರಡೈಸ್, ಜರ್ಬೇರಾ ಮತ್ತು ಇತರೆ ಹೂಗಳನ್ನು ಆಲಂಕಾರಿಕವಾಗಿ ಮತ್ತು ವೈವಿಧ್ಯಮಯವಾಗಿ ಜೋಡಣೆ ಮಾಡಿದ ಪ್ರದರ್ಶನ ನಡೆದಿದೆ.

ರೈತರಿಂದ ಗ್ರಾಹಕರಿಗೆ ನೇರ ಮಾರಾಟ: ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಶೀರ್ಷಿಕೆಯಡಿ ಕೃಷಿ ಇಲಾಖೆ ಆತ್ಮ ಯೋಜನೆ ಹಾಗೂ ವಿಕಸನ ಸಂಸ್ಥೆಯವರ ಸಹಯೋಗದೊಂದಿಗೆ ಜಿಲ್ಲೆಯ ರೈತ ಉತ್ಪಾದಕರ ಕಂಪನಿಗಳು ಅಭಿವೃದ್ಧಿಪಡಿಸಿದ ಬ್ರಾಂಡ್ ಗಳನ್ನು ಜಿಲ್ಲೆಯ ಗ್ರಾಹಕರಿಗೆ ಪರಿಚಯಿಸುವ ದೃಷ್ಠಿಯಿಂದ ರೈತ ಉತ್ಪಾದಕ ಕಂಪನಿಗಳ ಬೆಲ್ಲ, ರಾಗಿ, ಅಕ್ಕಿ ಮತ್ತು ಇತರೆ ಉತ್ಪನ್ನಗಳ ರಿಟೇಲ್ ಬ್ರಾಂಡ್ ಮೇಳವನ್ನು ಆಯೋಜಿಸಲಾಗಿದೆ.
ಪ್ರದರ್ಶನ ಮಳಿಗೆಗಳು:
ಕೌಶಲ್ಯಾಭಿವೃದ್ಧಿ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಸ್ವಸಹಾಯ ಗುಂಪುಗಳು ಹಾಗೂ ನಲ್ಮ್ ಯೋಜನೆಯಡಿ ನುರಿತ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದ ಸದಸ್ಯರುಗಳು ಅಭಿವೃದ್ಧಿಪಡಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲಾಗಿದೆ.
ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಮೇಳ, ಕಬ್ಬಿನ ಬೇಸಾಯ ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತು ಪ್ರಾತ್ಯಕ್ಷಿಕೆ,.ಮೀನುಗಾರಿಕೆ ಇಲಾಖೆಯಿಂದ ವಿವಿಧ ಅಲಂಕಾರಿಕ ಮೀನುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ .

ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ಮಂಡ್ಯ ನಗರಸಭೆ ಅಧ್ಯಕ್ಷ ಹೆಚ್.ಎಸ್. ಮಂಜು ಜಿಲ್ಲಾಧಿಕಾರಿ ಡಾ: ಹೆಚ್.ಎನ್ ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!