ಚಿರತೆ ತಪ್ಪಿಸಿಕೊಳ್ಳಲು ಮರವೇರಿದ ಯುವತಿ- ಇಳಿಯುವಾಗ ಬಿದ್ದು ಗಂಭೀರ ಗಾಯ

Team Newsnap
1 Min Read
young woman who climbed a tree to escape from a leopard fell down and was seriously injured ಚಿರತೆ ತಪ್ಪಿಸಿಕೊಳ್ಳಲು ಮರವೇರಿದ ಯುವತಿ- ಇಳಿಯುವಾಗ ಬಿದ್ದು ಗಂಭೀರ ಗಾಯ

ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಕುರಿ ಕಾಯುತ್ತಿದ್ದ ಯುವತಿ ಮರವೇರಿರುವಂತಹ ಘಟನೆ ರಾಮನಗರ ಮಾಗಡಿ ತಾಲೂಕಿನ ಮರಳುದೇವನ ಪುರ ಗ್ರಾಮದಲ್ಲಿ ನಡೆದಿದೆ.

ಗಡಿಬಿಡಿಯಲ್ಲಿ ಮರ ಏರುವಾಗ ಕೆಳಗೆ ಬಿದ್ದು ಯುವತಿಗೆ ಗಂಭೀರ ಗಾಯವಾಗಿದೆ. ಮರಳುದೇವನಪುರ ಗ್ರಾಮದ ವಿಜಯಲಕ್ಷ್ಮಿ ಚಿರತೆಯಿಂದ ಪಾರಾದ ಯುವತಿ.ನನ್ನ ಆಸೆ ಆಕಾಂಕ್ಷೆಗಳು ನಿವೃತ್ತವಾಗಿವೆ: ಎಸ್.ಎಂ.ಕೃಷ್ಣ

ಜಮೀನಿನ ಬಳಿ ಕುರಿ ಮೇಯಿಸುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಯುವತಿ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಮರವೇರಿದ್ದಾಳೆ. ಬಳಿಕ ಮರದಿಂದ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದು ಸೊಂಟ ಮುರಿದುಕೊಂಡಿದ್ದಾಳೆ.

ಗಾಯಾಳು ವಿಜಯಲಕ್ಷ್ಮಿಯನ್ನು ಮಾಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಚಿರತೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

Share This Article
Leave a comment