ಜೂನ್ 21 ರಿಂದ 18 ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್​ : ನವೆಂಬರ್ ವರೆಗೆ ಉಚಿತ ರೇಷನ್ – ಮೋದಿ ಘೋಷಣೆ

Team Newsnap
1 Min Read

ದೇಶದಲ್ಲಿ ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್​ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಿಸಿದರು.

ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಿಂದ ಇದು ಜಾರಿಯಾಗಲಿದೆ ಎಂದು ರಾಷ್ಟ್ರ ಉದ್ದೇಶಿ ಮಾಡಿದ ಭಾಷಣದಲ್ಲಿ ಈ ವಿಷಯ ತಿಳಿಸಿದರು.‌

ಪ್ರಧಾನಮಂತ್ರಿಯಾಗಿ ಪ್ರಮುಖ ಘೋಷಣೆಗಳು :

  • ಕೊರೊನಾದ 2ನೇ ಅಲೆಯೊಂದಿಗೆ ನಮ್ಮ ಹೋರಾಟ ಮುಂದುವರೆಯುತ್ತಿದೆ. ಈ ಹೋರಾಟದಲ್ಲಿ ನಾವು ನಮ್ಮ ಸಂಬಂಧಿಕರು, ಪರಿಚಿತರನ್ನು ಕಳೆದುಕೊಂಡಿದ್ದೇವೆ.
  • ಕೊರೊನಾ ಆಸ್ಪತ್ರೆ, ಐಸಿಯು, ವೆಂಟಿಲೇಟರ್, ಟೆಸ್ಟಿಂಗ್ ನೆಟ್ವರ್ಕ್ ಸೇರಿದಂತೆ ಹೊಸ ಹೆಲ್ತ್ ಮೂಲಸೌಕರ್ಯ ತಯಾರಾಗಿದೆ.
  • ಭಾರತದಲ್ಲಿ ಮೆಡಿಕಲ್ ಆಕ್ಸಿಜನ್​ನ ಬೇಡಿಕೆ ಇದ್ದಕ್ಕಿದ್ದಂತೆ ಏರಿಕೆಯಾಯ್ತು. ಹಿಂದೆಂದೂ ಇಂಥ ಬೇಡಿಕೆ ಸೃಷ್ಟಿಯಾಗಿರಲಿಲ್ಲ.
  • ಆಕ್ಸಿಜನ್ ಪೂರೈಸಲು ಆಕ್ಸಿಜನ್ ರೈಲು, ವಿಮಾನ, ಹಡಗು ಸೇರಿದಂತೆ ಎಲ್ಲ ಸಾರಿಗೆಯನ್ನು ಬಳಸಲಾಯ್ತು.
  • ಮಿಷನ್ ಇಂಧ್ರಧನುಷ್​ ಲಾಂಚ್ ಮಾಡಲಾಯ್ತು. ಈ ಮೂಲಕ ದೇಶದಲ್ಲಿ ಯಾರ್ಯಾರಿಗೆ ವ್ಯಾಕ್ಸಿನ್ ನೀಡಬೇಕಿತ್ತು ಎಲ್ಲರಿಗೂ ವ್ಯಾಕ್ಸಿನ್ ನೀಡಲು ಪ್ರಾರಂಭಿಸಿದ್ವಿ.
  • ದೇಶದಲ್ಲಿ ನಮಗೆ ಕಡಿಮೆ ವ್ಯಾಕ್ಸಿನ್ ತಯಾರಿಸುವ ವಿಶ್ವಾಸವಿತ್ತು.
  • ಬರುವ ದೀಪಾವಳಿ ತನಕ ಉಚಿತ ಪಡಿತರ ವಿತರಣೆ
Share This Article
Leave a comment