ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿರವರ ಹೆಸರು ಬಳಸಿ ವಂಚನೆ 

Team Newsnap
1 Min Read

ಬೆಂಗಳೂರು : ಇನ್ಫೋಸಿಸ್ ಅಧ್ಯಕ್ಷರಾದ ಡಾ. ಸುಧಾಮೂರ್ತಿ ಅವರ ಹೆಸರನ್ನು ಬಳಸಿಕೊಂಡು ಅಮೇರಿಕಾದಲ್ಲಿ ವಂಚನೆ ನಡೆದಿರುವ ಘಟನೆ ಕಂಡುಬಂದಿದೆ.

ಮಮತ ಸಂಜಯ್ ಸುಧಾಮೂರ್ತಿ ಅವರ ಪರ್ಸನಲ್ ಅಸಿಸ್ಟೆಂಟ್, ಅಮೇರಿಕಾದ ಶೃತಿ ಹಾಗೂ ಲಾವಣ್ಯ ಎಂಬವವರು ವಿರುದ್ಧ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶೃತಿ ಹಾಗೂ ಲಾವಣ್ಯ ಅಮೇರಿಕಾದಲ್ಲಿ ಮಾಡಿದ್ದೇನು?

ಸುಧಾಮೂರ್ತಿಯವರನ್ನು KKNC ಎಂಬುವ ಸಂಸ್ಥೆ ತನ್ನ 50ನೇ ವರ್ಷದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು .ಆದರೆ, ಇಮೇಲ್ ಮೂಲಕ ಅಮೆರಿಕದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ ಎಂದು ಸಂದೇಶ ಕಳುಹಿಸಿದ ನಂತರವೂ , ಸುಧಾಮೂರ್ತಿಯವರ ಫೋಟೋಗಳನ್ನು ಬಳಸಿಕೊಂಡು ಜಾಹೀರಾತುಗಳನ್ನು ನೀಡಲಾಗಿತ್ತು.

ಸುಧಾಮೂರ್ತಿಯವರ ಅಸಿಸ್ಟೆಂಟ್ ಹೆಸರು ಬಳಸಿ , ಮೂರ್ತಿ ಟ್ರಸ್ಟ್ ಕಚೇರಿಯನ್ನು ಶೃಷ್ಟಿಸಿರುವ ಆರೋಪಿ ಲಾವಣ್ಯ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಬರುವರೆಂದು ಹೇಳಿ ವಂಚನೆ ಎಸಗಿದ್ದಾರೆ. ಪ್ರತಿ ಟಿಕೆಟ್‌ಗೆ 40 ಡಾಲರ್ (ರೂ.3320) ಪಡೆದು ಅಮೆರಿಕದಲ್ಲಿ ಮೀಟ್ ಆಡ್ ಗ್ರೀಟ್ ವಿತ್ ಡಾ. ಸುಧಾಮೂರ್ತಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಅರೋಪ ಬೆಳಕಿಗೆ ಬಂದಿದೆ.ಲೋಕಸಭಾ ಚುನಾವಣೆ- ಸಮರ್ಥ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ವೀಕ್ಷಕರ ನೇಮಕ

ಘಟನೆ ಸಂಬಂಧಿತವಾಗಿ ಐಟಿ ಆಕ್ಟ್ 66ಸಿ, 66ಡಿ ಹಾಗೂ ಐಪಿಸಿ 419, 420 ಕಾಯ್ದೆಯಡಿ  ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share This Article
Leave a comment