ಲೋಕಸಭಾ ಚುನಾವಣೆ- ಸಮರ್ಥ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ವೀಕ್ಷಕರ ನೇಮಕ

Team Newsnap
1 Min Read

ಬೆಂಗಳೂರು :

2024 ರ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ತಯಾರಿ ಆರಂಭವಾಗಿದ್ದರೆ, ಇತ್ತ ಕಾಂಗ್ರೆಸ್ ಸಹ ತನ್ನ ರಣತಂತ್ರಗಳನ್ನು ರೂಪಿಸುತ್ತಿದೆ.

28 ಲೋಕಸಭಾ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಆಯ್ಕೆ ವಿಷಯವಾಗಿ ವಿವರಗಳನ್ನು ಸಲ್ಲಿಸಲು ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೂ ಆಡಳಿತಾರೂಢ ಪಕ್ಷ ವೀಕ್ಷಕರನ್ನು ನೇಮಕ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ವೀಕ್ಷಕರನ್ನಾಗಿ ನೇಮಕ ಮಾಡಲಾಗಿರುವ ಸಚಿವರು ಕ್ಷೇತ್ರಗಳಿಗೆ ಭೇಟಿ ನೀಡಿ, ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ವೀಕ್ಷಕರು ಸಭೆಗಳನ್ನು ನಡೆಸಿ, ಸಂಭಾವ್ಯ, ಸಮರ್ಥ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ವರದಿಗಳನ್ನು ಸಲ್ಲಿಸುತ್ತಾರೆ ಎಂದು ಡಿಸಿಎಂ ತಿಳಿಸಿದ್ದಾರೆ.

ಕ್ಷೇತ್ರ ಹಾಗೂ ವೀಕ್ಷಕರ ವಿವರ :

ಬಾಗಲಕೋಟೆ-
ಪ್ರಿಯಾಂಕ್ ಖರ್ಗೆ,

ಬೆಂಗಳೂರು ಕೇಂದ್ರ – ಎನ್ ಎಸ್ ಬೋಸರಾಜು,

ಬೆಂಗಳೂರು ಉತ್ತರ – ಡಾ.ಜಿ ಪರಮೇಶ್ವರ್,

ಬೆಂಗಳೂರು ಗ್ರಾಮಾಂತರ – ಕೆ ವೆಂಕಟೇಶ್,

ಬೆಂಗಳೂರು ದಕ್ಷಿಣ – ಡಾ. ಶರಣ್ ಪ್ರಕಾಶ್ ಪಾಟೀಲ್,

ಬೆಳಗಾವಿ – ಶಿವರಾಜ್ ತಂಗಡಗಿ,

ವಿಜಯಪುರ – ಸತೀಶ್ ಜಾರಕಿಹೊಳಿ,

ಚಿಕ್ಕಬಳ್ಳಾಪುರ – ಬಿಝೆಡ್ ಝಮೀರ್ ಅಹ್ಮದ್ ಖಾನ್,

ಧಾರವಾಡ – ಲಕ್ಷ್ಮಿ ಹೆಬ್ಬಾಳ್ಕರ್,

ಉಡುಪಿ ಚಿಕ್ಕಮಗಳೂರು – ಮಂಕಾಳ ವೈದ್ಯ,

ಶಿವಮೊಗ್ಗ – ಕೆಎಸ್ ರಾಜಣ್ಣ

ಹಾಸನ – ಚಲುವರಾಸ್ವಾಮಿ

ಮಂಡ್ಯ – ಡಾಎಂ ಸಿ ಸುಧಾಕರ್

ಮೈಸೂರು – ಎಂ ಎನ್ ಸುರೇಶ್

congras patti
Share This Article
Leave a comment