ಕ್ಯಾಸಿನೊಗಳಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಆಪ್ತ ಸ್ನೇಹಿತ ರಾಹುಲ್
ವಿರುದ್ಧ ಸ್ಯಾಂಡಲ್ವುಡ್ ಸ್ಟಾರ್ ನಟಿ ಸಂಜನಾ ಗಲ್ರಾನಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೋರ್ಟ್ ಸೂಚನೆ ಮೇರೆಗೆ ಬೆಂಗಳೂರಿನ ಇಂದಿರಾನಗರ ಠಾಣೆಯಲ್ಲಿ ಸಂಜನಾ ಆಪ್ತ ಸ್ನೇಹಿತ ರಾಹುಲ್ ತೋನ್ಸೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೂರಿನಲ್ಲಿ ಇರುವ ಅಂಶಗಳು :
1) ನನ್ನ ಸ್ನೇಹಿತನಾದ ರಾಹುಲ್, ಆತ ಹೇಳಿದ ಕಡೆಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ, ರಾಮಕೃಷ್ಣ ಮತ್ತು ರಾಗೇಶ್ವರಿ ಜೊತೆ ಸೇರಿ ಅವರ ಖಾತೆಗೆ ನನ್ನಿಂದ ಹಣವನ್ನು ಹಾಕಿಸಿಕೊಂಡಿದ್ದಾರೆ.
2) ಕಳೆದ ಮೂರು ವರ್ಷಗಳಿಂದ ಹಣ ಹಾಕಿಸಿಕೊಂಡರು. ಇಲ್ಲಿಯವರೆಗೂ ಯಾವುದೇ ಲಾಭಾಂಶವನ್ನೂ ನೀಡಿಲ್ಲ.
3) ನಾನು ಹಲವಾರು ಬಾರಿ ಹಣವನ್ನು ನೀಡುವಂತೆ ಕೇಳಿದ್ದರೂ ಹಣ ಹಿಂತಿರುಗಿಸಿಲ್ಲ. ನಾನು ನೀಡಿದ ಹಣವನ್ನು ಮೂರು ಜನರು ಕಾನೂನು ಬಾಹಿರ ಚಟುವಟಿಕೆಯಲ್ಲಿ ಹೂಡಿಕೆ ಮಾಡಿ ಲಾಭ ಮಾಡಿಕೊಂಡಿದ್ದಾರೆ.
4) ನನ್ನ ಹಣ ಹಿಂತಿರುಗಿಸದೆ ಮೋಸ ಮಾಡಿದ್ದಲ್ಲದೆ, ನನ್ನ ಘನತೆಗೆ ಧಕ್ಕೆಯಾಗುವಂತಹ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಮೂವರು ಕಲಂ: 34, 12(ಬಿ), 107, 354, 406, 420, 506 ಐಪಿಸಿ ಕಲಂಗಳ ಅಡಿಯಲ್ಲಿ ಆರೋಪವೆಸಗಿದ್ದಾರೆ.
5) ಆ ಮೂವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )