ಉತ್ತರಾಖಂಡ್ ಮೇಘಾ ಸ್ಪೊಟ : 10 ಮಂದಿ ಕನ್ನಡಿಗರಿಗೆ ಸಂಕಷ್ಟದಲ್ಲಿ

Team Newsnap
1 Min Read

ಉತ್ತರಾಖಂಡ್ ರಾಜ್ಯದಲ್ಲಿ ಮೇಘಸ್ಫೋಟದಿಂದ ಭಾರೀ ಪ್ರವಾಹ ಉಂಟಾಗಿ ಪ್ರವಾಸಕ್ಕೆ ಹೋಗಿದ್ದ 10 ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

ಗಂಗಾಭಟ್, ರಿತೀಶ್ ಭಟ್(ಯಲಹಂಕ), ಗಣೇಶ್(ಬಸವೇಶ್ವರನಗರ), ಅಶ್ವಥ್ ನಾರಾಯಣ್(ಆರ್‌ಟಿ ನಗರ) ಬೆಂಗಳೂರು ಮೂಲದವರಾಗಿದ್ದಾರೆ. ಬೆಂಗಳೂರಿಗರಲ್ಲದೇ ಉಡುಪಿಯ ಒಬ್ಬರು ಕೂಡ ಪ್ರವಾಹದಲ್ಲಿ ಪರದಾಡುತ್ತಿದ್ದಾರೆ. ಉಡುಪಿ ಮೂಲದ ಮಹಿಳೆ ರೇಖಾ, ಸಿಂದಗಿಯ ವೈದ್ಯೆ ಡಾ.ರೇಖಾ ಮತ್ತು ಮಿಲಿಟರಿ ವೈದ್ಯ ಡಾ.ಅನಿತಾ ಪಂಪಣ್ಣನವರ್ ಪ್ರವಾಹದಲ್ಲಿ ಸಿಲುಕಿದ್ದಾರೆ.

ಪ್ರವಾಹಪೀಡಿತ ಸ್ಥಳದಲ್ಲಿ
ಸಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ 10 ಮಂದಿಕನ್ನಡಿಗರು ನೆರವು ಕೋರಿ ಸಹಾಯವಾಣಿಗೆ ಸಂಪರ್ಕ ಮಾಡಿದ್ದಾರೆ.

ಉತ್ತರಾಖಂಡ್‍ದ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಲ್ಲಿ 4 ಜನ ಬೆಂಗಳೂರಿನವರು ಅದರಲ್ಲಿ ಇಬ್ಬರು ಯಲಹಂಕ ಮೂಲದವರಾಗಿದ್ದು, ಇನ್ನೊಬ್ಬರು ಬಸವೇಶ್ವರನಗರ, ಆರ್‍ಟಿನಗರ ನಿವಾಸಿಗಳಾಗಿದ್ದಾರೆ. ನಾಲ್ವರು ಈಗ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article
Leave a comment