ಮೈಸೂರಿನ ಚಾಮುಂಡಿಪುರಂನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Team Newsnap
1 Min Read

ಮೈಸೂರು : ನಗರದ ಚಾಮುಂಡಿಪುರಂ ಬಡಾವಣೆಯಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮಹದೇವಸ್ವಾಮಿ (48) ,ಅನಿತಾ (35) ,ಚಂದ್ರಕಲಾ (17) ,ಧನಲಕ್ಷ್ಮಿ (15) ಮೃತರಾದವರು.

ಒಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ.ಉಳಿದ ಮೂರು ಶವಗಳ ಮನೆಯ ಹಾಲ್ ನಲ್ಲಿ ಕಂಡು ಬಂದಿವೆ.

ಗಂಡ , ಹೆಂಡತಿ, ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ.

ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಹಾಗೂ ಡಿಸಿಪಿಗಳಾದ ಮುತ್ತುರಾಜ್ ಮತ್ತು ಜಾಹ್ನವಿ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸರ್ವಾಧಿಕಾರಿ ಆಡಳಿತ ಧೋರಣೆಯನ್ನು ಪತ್ರಿಕೋದ್ಯಮ ಖಂಡಿಸಬೇಕು : ಸಚಿವ ಡಾ ಮಹದೇವಪ್ಪ

ಮಹದೇವಸ್ವಾಮಿ ಆರ್.ಎಂ.ಸಿ.ಯಲ್ಲಿ ಕಮೀಷನ್ ಏಜೆಂಟ್ ಆಗಿದ್ದರು ,ಬಂಡಿಪಾಳ್ಯದಲ್ಲಿ ಮಳಿಗೆ ಹೊಂದಿದ್ದರು.
ಕೆ.ಆರ್.ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a comment