ತುಮಕೂರಿನಲ್ಲಿ ದುರಂತ : ನೀರಿನಲ್ಲಿ ಮುಳುಗುವ ಬಾಲಕನನ್ನು ರಕ್ಷಿಸಲು ಹೋಗಿ ನಾಲ್ವರು ಜಲಸಮಾಧಿ

Team Newsnap
1 Min Read

ತುಮಕೂರು: ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಸಮೀಪ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ನಾಲ್ವರು ನೀರು ಪಾಲಾದ ಘಟನೆ ನಡೆದಿದೆ.

ಶಂಕರ್ (11), ರಕ್ಷಿತ್ (11), ಲಕ್ಷ್ಮಿ (50) ಹಾಗೂ ಮಹಾದೇವಪ್ಪ (51) ಸಾವನ್ನಪ್ಪಿದರು ಎಂದು ಗೊತ್ತಾಗಿದೆ.

ನೀರಿಗೆ ಇಳಿದಿದ್ದ ರಂಜಿತ್ ಎಂಬ ಇನ್ನೊಬ್ಬ ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ.

ಬಾಲಕನೊಬ್ಬ ಕಾಲು ತೊಳೆದುಕೊಂಡು ಬರುತ್ತೇನೆ ಎಂದು ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋಕಟ್ಟೆಗೆ ಹೋಗಿ ಅಲ್ಲಿ ಕಾಲು ಜಾರಿ ಬಿದ್ದ. ಈತನನ್ನು ರಕ್ಷಿಸಲು ಹೋಗಿ ತಾಯಿ ಹಾಗೂ ಮತ್ತೊಬ್ಬ ಮಗ ನೀರಿಗೆ ಬಿದ್ದಿದ್ದಾರೆ. ಇವರನ್ನು ರಕ್ಷಿಸಲು ಹೋಗಿದ್ದ ಮಹದೇವಪ್ಪ ಎಂಬ ವ್ಯಕ್ತಿ ಸಹ ಮೃತಪಟ್ಟಿದ್ದಾರೆ.ಮೈಸೂರು ಲೋಕಸಭಾ ಕ್ಷೇತ್ರ – ಜಿಟಿ , ಸಾರಾ ನಡುವೆ ಜೆಡಿಎಸ್ ಟಿಕೆಟ್ ಗೆ ಪೈಪೋಟಿ

ಮೃತ ದೇಹಗಳ ಹುಡುಕಾಟ ನಡೆಸಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a comment